ಕೇಜ್ರಿವಾಲ್ ಸಿಂಗಪುರ ಪ್ರವಾಸವನ್ನು ತಿರಸ್ಕರಿಸಿದ ಲೆಫ್ಟಿನೆಂಟ್ ಗವರ್ನರ್!

Prasthutha|

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಿಂಗಪುರ ಪ್ರವಾಸಕ್ಕೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ತಡೆಯೊಡ್ಡಿದ್ದಾರೆ. ಮುಖ್ಯಮಂತ್ರಿ ಅವರು ವಿದೇಶಕ್ಕೆ ತೆರಳುವ ಸಂಬಂಧಿತವಾಗಿ ದೆಹಲಿ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಅವರು ತಿರಸ್ಕರಿಸಿದ್ದಾರೆ.

- Advertisement -

ಆಗಸ್ಟ್ 1ರಂದು ಸಿಂಗಪುರದಲ್ಲಿ ನಡೆಯಲಿರುವ ವಿಶ್ವ ನಗರಗಳ ಸಮ್ಮೇಳನವು ಮೇಯರ್ಗಳಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಮುಖ್ಯಮಂತ್ರಿಯಾಗಿರುವ ನೀವು ಇದರಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲವೆಂದು ಕೇಜ್ರಿವಾಲ್ಗೆ ಲೆಫ್ಟಿನೆಂಟ್ ಗವರ್ನರ್ ಸಲಹೆ ನೀಡಿದ್ದಾರೆ’ ಎಂದು ಮೂಲಗಳು ಗುರುವಾರ ತಿಳಿಸಿವೆ.

ಸಮ್ಮೇಳನದಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ದೆಹಲಿ ಸರ್ಕಾರವು ವಿಶೇಷ ವಿಚಾರವನ್ನೇನೂ ಮಂಡಿಸುತ್ತಿಲ್ಲ. ಹೀಗಿರುವಾಗ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಅಗತ್ಯವೇನಿದೆ. ಅವರು ಪಾಲ್ಗೊಂಡರೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದೂ ಲೆಫ್ಟಿನೆಂಟ್ ಗವರ್ನರ್ ಅಭಿಪ್ರಾಯಪಟ್ಟಿದ್ದಾರೆ ಎಂದೂ ಹೇಳಿವೆ.

- Advertisement -

ಲೆಫ್ಟಿನೆಂಟ್ ಗವರ್ನರ್  ಅವರ ಈ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಪ್ರರಿಕ್ರಿಯೆ ನೀಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಸಿಂಗಪುರ ಪ್ರವಾಸಕ್ಕೆ ಅನುಮತಿ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮೇಯರ್ಗಳಿಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುವುದು ಸರಿಯಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಸಲಹೆ ನೀಡಿದ್ದಾರೆ. ಹಿಂದೆ ಈ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದಾರೆ. ಪ್ರಧಾನ ಮಂತ್ರಿಯವರೂ ಪಾಲ್ಗೊಂಡಿದ್ದರು. ಹೀಗಿರುವಾಗ ಕೇಜ್ರಿವಾಲ್ ಅವರ ಪ್ರವಾಸಕ್ಕೆ ಮಾತ್ರ ತಡೆಯೊಡ್ಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ

ಕೇಜ್ರಿವಾಲ್ ಸಿಂಗಪುರ ಪ್ರವಾಸ ತಿರಸ್ಕಾರ ಮಾಡಿದ್ದರ ಹಿಂದೆ ರಾಜಕೀಯ ಹುನ್ನಾರ ಇದೆ ಎಂಬುವುದು ಸ್ಪಷ್ಟ ಎಂದು ಮನೀಷ್ ಆರೋಪಿಸಿದ್ದಾರೆ.



Join Whatsapp