ನವದೆಹಲಿ: ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಫೋರ್ಬ್ಸ್ ನ ರಿಯಲ್-ಟೈಮ್ ಬಿಲಿಯನೇರ್ಗಳ ಪಟ್ಟಿಯ ಪ್ರಕಾರ, ಬಿಲ್ ಗೇಟ್ಸ್ ಅವರ ನಿವ್ವಳ ಮೌಲ್ಯವು $104.6 ಶತಕೋಟಿಯಷ್ಟಿದೆ. ಬಿಲ್ ಗೇಟ್ಸ್ ತನ್ನ ಸಂಪತ್ತಿನಿಂದ 20 ಶತಕೋಟಿ ಡಾಲರ್ ಅನ್ನು ತನ್ನ ಲಾಭರಹಿತ ಸಂಸ್ಥೆಗೆ ದೇಣಿಗೆ ನೀಡುವುದಾಗಿ ಘೋಷಿಸಿದ ನಂತರ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ.
ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಅವರ ಒಟ್ಟು ನಿವ್ವಳ ಮೌಲ್ಯ $234.4 ಬಿಲಿಯನ್, ಲೂಯಿಸ್ ವಿಟಾನ್ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರ ಆಸ್ತಿ ಮೌಲ್ಯ $155.7 ಬಿಲಿಯನ್ ಮತ್ತು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, 90 ಶತಕೋಟಿ ಡಾಲರ್ ಮೌಲ್ಯದ ಮುಕೇಶ್ ಅಂಬಾನಿ ಈ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಇಳಿದಿದ್ದಾರೆ.