ಗುಜರಾತ್’ನಲ್ಲಿ ಅಧಿಕಾರಕ್ಕೇರಿದರೆ 300 ಯೂನಿಟ್ ಉಚಿತ ವಿದ್ಯುತ್: ಅರವಿಂದ ಕೇಜ್ರಿವಾಲ್

Prasthutha|

ಸೂರತ್: ಮುಂಬರುವ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೇರಿದರೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

- Advertisement -

ಸೂರತ್’ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೆರದವರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ರಾಜ್ಯದಲ್ಲಿ ಯಾವುದೇ ಅಡಚಣೆಯಿಲ್ಲದೆ ನಿರಂತರ ವಿದ್ಯುತ್ ಪೂರೈಸುವುದಾಗಿ ಘೋಷಿಸಿದರು.

ಜುಲೈ ತಿಂಗಳಲ್ಲಿ ಎರಡನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿರುವ ಅವರು, ನಾನು ಈ ಮೇಲಿನ ಭರವಸೆಯನ್ನು ಮುಕ್ತವಾಗಿ ನೀಡುತ್ತೇನೆ. ಇದರಲ್ಲಿ ಯಾವುದೇ ತಪ್ಪು ಕಂಡುಬಂದರೆ ಮುಂದಿನ ಚುನಾವಣೆಯಲ್ಲಿ ಎಎಪಿಗೆ ಮತ ಹಾಕದಿರಲು ನೀವು ಸ್ವತಂತ್ರರು. ರಾಜ್ಯದಲ್ಲಿ ಅಧಿಕಾರಕ್ಕೇರಿದರೆ ಜನರ ಆಕಾಂಕ್ಷೆಗಳನ್ನು ಈಡೇರಿಸಲಾಗುವುದು ಎಂದು ಅವರು ತಿಳಿಸಿದರು.

- Advertisement -

ಅಲ್ಲದೆ, ಡಿಸೆಂಬರ್ 31, 2021 ರ ಮೊದಲಿನ ಬಾಕಿಯಿರುವ ಎಲ್ಲಾ ಕರೆಂಟ್ ಬಿಲ್’ಗಳನ್ನು ಮನ್ನಾ ಮಾಡುತ್ತೇನೆಂದೂ ಅವರು ಘೋಷಣೆ ಮಾಡಿದ್ದಾರೆ.

ಗುಜರಾತ್ ಅಸೆಂಬ್ಲಿ ಚುನಾವಣೆ ಡಿಸೆಂಬರ್’ನಲ್ಲಿ ನಡೆಯಲಿದ್ದು, ಎಎಪಿ ಗುಜರಾತ್ ರಾಜ್ಯವನ್ನು ಗೆಲ್ಲಲು ಯೋಜನೆ ರೂಪಿಸುತ್ತಿದೆ.



Join Whatsapp