ನಾಲ್ಕನೆಯ ದಿನವೂ ನಡೆಯದ ಸಂಸತ್ ಕಲಾಪ

Prasthutha|

ನವದೆಹಲಿ: ಜು.18ರಿಂದ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ನಾಲ್ಕನೆಯ ದಿನವಾದ ಗುರುವಾರ ಕೂಡ ಯಾವುದೇ ಚರ್ಚೆ ನಡೆಯಲಿಲ್ಲ.

- Advertisement -

ಜಿಎಸ್ ಟಿ ಚರ್ಚೆಗೆ ಕಾಂಗ್ರೆಸ್ ಮತ್ತು ಪ್ರತಿ ಪಕ್ಷಗಳು ಇಂದು ಕೂಡ ಲೋಕಸಭೆಯಲ್ಲಿ ಒತ್ತಾಯಿಸಿ, ಕೊನೆಗೆ ಕಲಾಪ ಬಹಿಷ್ಕರಿಸಿದವು.

 ಗದ್ದಲ ಹೆಚ್ಚಾದಾಗ ಲೋಕಸಭಾಧ್ಯಕ್ಷರು ಮೊದಲು ಮಧ್ಯಾಹ್ನ ಎರಡೂವರೆ ಗಂಟೆಯವರೆಗೆ ಕಲಾಪವನ್ನು ಮುಂದೂಡಿದರು. ಮತ್ತೆ ಕಲಾಪ ಸಮಾವೇಶಗೊಂಡಾಗ ಸಂಸದರ ಪ್ರತಿಭಟನೆಯ ನಿಷೇಧ ಪ್ರಶ್ನಿಸಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಧರಣಿಗೆ ತಯಾರಾದಾಗ ಲೋಕಸಭೆಯ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

- Advertisement -

ರಾಜ್ಯಸಭೆಯಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. 

ಕಾಂಗ್ರೆಸ್, ಡಿಎಂಕೆ, ಎಡ ಪಕ್ಷಗಳು, ಎನ್ ಸಿಪಿ ಪಕ್ಷಗಳು ಜಿಎಸ್ ಟಿ ಚರ್ಚೆ ನಡೆಯದೆ ಬೇರೆಯದಕ್ಕೆ ಅವಕಾಶವಿಲ್ಲ ಎಂದು ಕಲಾಪ ಬಹಿಷ್ಕರಿಸಿದರು. ಕೆಳಮನೆಯಲ್ಲಿ ನಿಯಮ 377ರಡಿ ಹೆಸರಿಗೆ ಕೆಲವು ಮಟ್ಟಿನ ಚರ್ಚೆ ನಡೆಯಿತು. ಕಾಂಗ್ರೆಸ್ ಹಣದುಬ್ಬರ ಮತ್ತು ಬೆಲೆಯೇರಿಕೆ ಪ್ರಶ್ನೆಯನ್ನೂ ಎತ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು.



Join Whatsapp