ಮಂಗಳೂರಿನಲ್ಲಿ ಮೊದಲ ಮಂಕಿಫಾಕ್ಸ್‌ ಪತ್ತೆ; ಯುವಕ ಆಸ್ಪತ್ರೆಗೆ ದಾಖಲು

Prasthutha|

ಮಂಗಳೂರು:  ಹೊಸ ವೈರಸ್ ಮಂಕಿ ಫಾಕ್ಸ್ ಸೋಂಕು ತಗುಲಿದ ವ್ಯಕ್ತಿಯೋರ್ವ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಘಟನೆ ನಡೆದಿದೆ.  ಕಣ್ಣೂರ್ ಮೂಲದ ಯುವಕನಲ್ಲಿ ಮಂಕಿ ಫಾಕ್ಸ್ ರೋಗ ಲಕ್ಷಣಗಳು ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಆತನನ್ನು ಪರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಯುವಕನ ಮಾದರಿ ಸಂಗ್ರಹಿಸಿದ್ದು, ಪುಣೆಯಲ್ಲಿರುವ ವೈರಾಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮಾತ್ರವಲ್ಲದೆ, ಯುವಕನನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದ್ದು ನಿಗಾ ಇರಿಸಲಾಗಿದೆ. ಕೇರಳದಲ್ಲಿ ಮೊದಲ ಮಂಕಿಫಾಕ್ಸ್ ಪ್ರಕರಣ ಜು.12 ರಂದು ದಾಖಲಾಗಿದ್ದು , ಇದು ಮಂಗಳೂರಿನಲ್ಲಿ ಕಂಡು ಬಂದಂತಹ ಮೊದಲ ಪ್ರಕರಣವಾಗಿದೆ.

ಜುಲೈ 14 ರಂದು ಅಬುಧಾಬಿಯಿಂದ ಕೇರಳಕ್ಕೆ ಹಿಂದಿರುಗಿದ 35 ವರ್ಷದ ವ್ಯಕ್ತಿಯಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿತ್ತು. ಅವರು ಈಗ ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಯೊಂದಿಗೆ ಪ್ರಯಾಣಿಸಿದ ಐದು ಜಿಲ್ಲೆಗಳ 164 ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ.

- Advertisement -



Join Whatsapp