ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಲು ಬಂದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಅವರಿಗೆ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿದ ಘಟನೆ ಇಂದು ವಿಧಾನ ಸೌಧದಲ್ಲಿ ನಡೆದಿದೆ.
ಬೈರತಿ ಸುರೇಶ್ ಅವರು ಮತದಾನ ಮಾಡಿ ವಾಪಸ್ ಬರುತ್ತಿದ್ದಾಗ ಬಿಜೆಪಿ ಶಾಸಕರಾದ ರಾಜೂಗೌಡ, ಗೂಳಿಹಟ್ಟಿ ಶೇಖರ್, ಎಂ.ಪಿ. ರೇಣುಕಾಚಾರ್ಯ ಮುಖಾಮುಖಿಯಾದರು. ಈ ಸಂದರ್ಭ ರಾಜೂಗೌಡ ತಮ್ಮ ಹೆಗಲ ಮೇಲಿದ್ದ ಕೇಸರಿ ಶಾಲನ್ನು ತೆಗೆದು ಬೈರತಿ ಸುರೇಶ್ ಅವರ ಹೆಗಲಿಗೆ ಹಾಕಿದರು.
ತಕ್ಷಣ ಸುರೇಶ್ ಅವರು ಅದನ್ನು ತೆಗೆದು ವಾಪಸ್ ನೀಡಿದ್ದಾರೆ.