44 ನೇ ಚೆಸ್ ಒಲಿಂಪಿಯಾಡ್‌ ಟಾರ್ಚ್ ರಿಲೇ ಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

Prasthutha|

ಬೆಂಗಳೂರು : ಜುಲೈ 28 ರಿಂದ ಆಗಸ್ಟ್ 10 ರವರೆಗೆ ಚೆನ್ನೈನಲ್ಲಿ  ನಡೆಯಲಿರುವ 44 ನೇ ಚೆಸ್ ಒಲಿಂಪಿಯಾಡ್‌ ಟಾರ್ಚ್ ರಿಲೇಯನ್ನು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರ ಘನ್ಯ ಉಪಸ್ಥಿತಿಯಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ  ಅವರು ರಾಜಭವನದಲ್ಲಿ ಸ್ವಾಗತಿಸಿದರು.

- Advertisement -

ಈ ಬಗ್ಗೆ ಮಾತನಾಡಿದ ಸಚಿವ ಡಾ.ನಾರಾಯಣಗೌಡ ಅವರು,  ಮೊದಲ ಬಾರಿಗೆ ಒಲಿಂಪಿಕ್ ಮಾದರಿಯಲ್ಲಿ ಟಾರ್ಚ್ ರಿಲೇಯನ್ನು ಹಮ್ಮಿಕೊಂಡಿದ್ದು,  ಇದರಿಂದ ಚೆಸ್ ಆಟವನ್ನು ಮತ್ತಷ್ಟು ಜನಪ್ರಿಯಗೊಳಿಸಲು ಸಹಕಾರಿ ಆಗಲಿದೆ.  ವಿಶ್ವದ ಅತಿದೊಡ್ಡ ಚೆಸ್ ಈವೆಂಟ್‌ನ ಆಯೋಜಿಸುವುದು ದೊಡ್ಡ ಸೌಭಾಗ್ಯ, ಆ ಅವಕಾಶ ಮೊದಲ ಬಾರಿಗೆ ನಮ್ಮ ದೇಶಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ದೇಶದ 75 ನಗರದಲ್ಲಿ ಮಾತ್ರ ಈ ಟಾರ್ಚ್ ಲೈಟ್ ಸಾಗಲಿದ್ದು, ಕರ್ನಾಟಕದ ಬೆಂಗಳೂರು ಮತ್ತು ಮಂಗಳೂರಿಗೆ ಮಾತ್ರ ಈ ಸುವರ್ಣಾವಕಾಶ ಸಿಕ್ಕಿದೆ.  ಚೆಸ್ ಒಂದು ಬುದ್ದಿವಂತಿಕೆಯ ಆಟವಾಗಿದ್ದು, ನಮ್ಮ ರಾಜ್ಯ ಮತ್ತು ದೇಶದಲ್ಲಿ ವಿಶ್ವನಾಥ್ ಆನಂದ್ ರಂತಹ ಸಾವಿರಾರು ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಹಾರೈಸಿದರು.

- Advertisement -

ಕರ್ನಾಟಕ ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಕೆ ಗೋವಿಂದರಾಜು, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



Join Whatsapp