ನವದೆಹಲಿ : ದಯವಿಟ್ಟು ಪತ್ನಿಯನ್ನ ಹುಡುಕಿಕೊಡಿ ಎಂದು ದೆಹಲಿ ಮೂಲದ ಪತಿಯೊಬ್ಬ ಟ್ವಿಟರ್ ಮೂಲಕ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ಧಾರೆ.
ದೆಹಲಿ ನಿವಾಸಿಯಾಗಿರುವ ಅರವಿಂದ್ ಎಂಬಾತ, ಬಲವಂತವಾಗಿ ಅನಾಮಿಕ ವ್ಯಕ್ತಿಯೊಬ್ಬ ಪತ್ನಿ ಮಕ್ಕಳನ್ನ ಕರೆದೊಯ್ದಿರೋದಾಗಿ ದೂರು ನೀಡಿದ್ದಾನೆ. ಪತ್ನಿ ಬೇರೆಯವನ ಜೊತೆ ಬೆಂಗಳೂರುಗೆ ಬಂದಿದ್ದು, ಹುಡುಕಿ ಕೊಡಿ ಎಂದು ಪತ್ನಿ ಮಕ್ಕಳ ಫೊಟೋ ಹಾಕಿ ಟ್ವೀಟ್ನಲ್ಲಿ ಮನವಿ ಮಾಡಿದ್ಧಾರೆ.
ಇದಕ್ಕೆ ಬೆಂಗಳೂರು ಪೊಲೀಸರು ಪ್ರತಿಕ್ರಿಯಿಸಿದ್ದು ದೂರು ನೀಡುವಂತೆ ರಿ ಟ್ವೀಟ್ ಮಾಡಿದ್ಧಾರೆ.