ಶ್ರೀಲಂಕಾ ಬಿಕ್ಕಟ್ಟು: ದೇಶ ತೊರೆಯದಂತೆ ಮಹಿಂದಾ ರಾಜಪಕ್ಸೆಗೆ ನಿರ್ಬಂಧ ಹೇರಿದ ನ್ಯಾಯಾಲಯ

Prasthutha|

ಕೊಲಂಬೊ: ಶ್ರೀಲಂಕಾದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಅನುಮತಿಯಿಲ್ಲದೆ ಜುಲೈ 28 ರವರೆಗೆ ದೇಶ ತೊರೆಯದಂತೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಅವರಿಗೆ ಸುಪ್ರೀಮ್ ಕೋರ್ಟ್ ನಿರ್ಬಂಧ ವಿಧಿಸಿದೆ ಎಂದು ಶ್ರೀಲಂಕಾ ಟ್ರಾನ್ಸ್’ಪರೆನ್ಸಿ ಇಂಟರ್’ನ್ಯಾಶನಲ್ ತಿಳಿಸಿದೆ.

- Advertisement -

ಇಬ್ಬರು ಮಾಜಿ ಕೇಂದ್ರ ಬ್ಯಾಂಕ್ ಗವರ್ನರ್’ಗಳು ಸೇರಿದಂತೆ ಇತರ ಮೂವರು ಅಧಿಕಾರಿಗಳಿಗೆ ಜುಲೈ 28 ರವರೆಗೆ ನ್ಯಾಯಾಲಯದ ಅನುಮತಿಯಿಲ್ಲದೆ ದೇಶವನ್ನು ತೊರೆಯುವಂತಿಲ್ಲ ಎಂದು ಭ್ರಷ್ಟಾಚಾರ ವಿರೋಧಿ ಗುಂಪು ಟ್ವೀಟ್’ನಲ್ಲಿ ತಿಳಿಸಿದೆ.

ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಸಲ್ಲಿಸಿದ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ ಕೆಲವೇ ಗಂಟೆಗಳ ಬಳಿಕ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

- Advertisement -

ಈ ಮಧ್ಯೆ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜಪಕ್ಸೆ ಅವರು ರಾಜೀನಾಮೆ ನೀಡಿರುವ ಕ್ರಮಕ್ಕೆ ಶ್ರೀಲಂಕಾ ಜನರು ಸಂಭ್ರಮಾಚರಣೆ ನಡೆಸಿದ್ದಾರೆ.



Join Whatsapp