ಪತ್ನಿಯ ಹಣದಿಂದ ಮಜಾ ಉಡಾಯಿಸಿದ ಪತಿಗೆ ಡಿವೋರ್ಸ್: ಕರ್ನಾಟಕ ಹೈಕೋರ್ಟ್

Prasthutha|

ಬೆಂಗಳೂರು: ಹೆಂಡತಿಯೊಂದಿಗೆ ಯಾವುದೇ ರೀತಿಯ ಭಾವನಾತ್ಮಕ ಬಾಂಧವ್ಯವಿಲ್ಲದೆ ಕೇವಲ ಆಕೆಯನ್ನು ‘ಧನಲಕ್ಷ್ಮಿ’ಯಂತೆ ಬಳಸುವುದು ಕೂಡ ಮಾನಸಿಕ ಕ್ರೌರ್ಯ ಎಂದು ಪರಿಗಣಿಸಿದ ನ್ಯಾಯಾಲಯ, ಪತ್ನಿಗೆ ವಿಚ್ಛೇದನ ಮಂಜೂರು ಮಾಡಿದೆ.

- Advertisement -

ಪತ್ನಿಯನ್ನು ಕೇವಲ ಹಣದ ದೃಷ್ಟಿಯಿಂದ ನೋಡದೆ, ಭಾವನಾತ್ಮಕವಾಗಿ ಬಾಳ್ವೆ ನಡೆಸಬೇಕೆಂಬ ಸಂದೇಶವನ್ನು ನ್ಯಾಯಾಲಯ ರವಾನಿಸಿದ್ದು, ಅಧೀನ ನ್ಯಾಯಾಲಯ ವಿವಾಹ ವಿಚ್ಛೇದನ ಮಂಜೂರು ಮಾಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಪತ್ನಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಅಲೋಕ್‌ ಅರಾಧೆ ಮತ್ತು ಜೆ. ಎಂ. ಖಾಜಿ ಅವರನ್ನು ಒಳಗೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಪ್ರಕರಣದ ವಿವರಗಳನ್ನು ಗಮನಿಸಿ ಪತ್ನಿ ನೀಡಿರುವ ಲೆಕ್ಕ ಪತ್ರ ನೋಡಿದರೆ ಪತಿಯು, ಪತ್ನಿಯಿಂದ ಸುಮಾರು 60 ಲಕ್ಷದಷ್ಟು ಸಾಲ ತೀರಿಸಲು ಹೊಸದಾಗಿ ವ್ಯಾಪಾರ ಮಾಡಲು ಖರ್ಚು ಮಾಡಿಸಿದ್ದಾನೆ. ಪತ್ನಿಯನ್ನು ಹಣಕ್ಕಾಗಿ ಮಾತ್ರ ಬಳಸಿಕೊಂಡಿದ್ದಾನೆ. ಆದರೆ ಆಕೆಯ ಬಗ್ಗೆ ಆತನಲ್ಲಿ ಯಾವುದೇ ಬಾಂಧವ್ಯವಿಲ್ಲದೆ ಬರಿಯ ಯಾಂತ್ರಿಕ ವರ್ತನೆ ಕಂಡು ಬಂದಿದ್ದು, ಪತಿಯ ವರ್ತನೆಯಿಂದ ಪತ್ನಿಗೆ ಮಾನಸಿಕ ಆಘಾತವಾಗಿದೆ ಎಂದು ನ್ಯಾಯಪೀಠ ಹೇಳಿದೆ.

- Advertisement -

ಪತಿ ನಡತೆಯಿಂದ ಪತ್ನಿಯ ಭಾವನೆಗಳಿಗೆ ಘಾಸಿಯಾಗಿದೆ. ಅದನ್ನು ಪತ್ನಿಗೆ ಆಗಿರುವ ಮಾನಸಿಕ ಕ್ರೌರ್ಯವೆಂದು ಪರಿಗಣಿಸಬಹುದಾಗಿದೆ. ಹಾಗಾಗಿ ಪತ್ನಿಯ ವಾದವನ್ನು ಒಪ್ಪಿ ವಿವಾಹ ವಿಚ್ಛೇದನ ಮಂಜೂರು ಮಾಡಲಾಗುತ್ತಿದೆ ಎಂದು ಕೋರ್ಟ್‌ ಆದೇಶಿಸಿದೆ.



Join Whatsapp