ಗಂಡನ ಮೇಲೆ ಅನುಮಾನಿಸಿ ಪದೇಪದೇ ಕಛೇರಿಗೆ ಹೋಗಿದ್ದಕ್ಕೆ ಡಿವೋರ್ಸ್: ಹೈಕೋರ್ಟ್ ವಿಶೇಷ ತೀರ್ಪು

Prasthutha|

ಚೆನ್ನೈ: ಗಂಡನ ಗುಣವನ್ನು ಅನುಮಾನಿಸುವುದು, ಅವನು ಕೆಲಸ ಮಾಡುತ್ತಿರುವ ಕಚೇರಿಗೆ ಆಗಾಗ ಭೇಟಿ ನೀಡಿ ತೊಂದರೆ ಸೃಷ್ಟಿಸುವುದು. ಆತನಿಗೆ ಆತನ ಸಹೋದ್ಯೋಗಿಗಳೊಂದಿಗೆ ಸಂಬಂಧ ಕಲ್ಪಿಸುವುದು ಕ್ರೌರ್ಯ ಎಂದು ಮದ್ರಾಸ್‌ ಹೈಕೋರ್ಟ್‌ ಪ್ರಕರಣವೊಂದರ ತೀರ್ಪಿನಲ್ಲಿ ಹೇಳಿದ್ದು, ಗಂಡನಿಗೆ ಡಿವೋರ್ಸ್ ನೀಡಿದೆ.

- Advertisement -

ಹೆಂಡತಿ ಶಾಲಾ ಶಿಕ್ಷಕಿಯಾಗಿದ್ದು, ಗಂಡ ವೈದ್ಯಕೀಯ ಕಾಲೇಜೊಂದರ ಪ್ರಾಧ್ಯಾಪಕನಾಗಿದ್ದನು. ಪತ್ನಿಯು ಗಂಡನ ಗುಣವನ್ನು ಆಗಾಗ ಅನುಮಾನಿಸುವುದು, ಅವನು ಕೆಲಸ ಮಾಡುತ್ತಿರುವ ಕಚೇರಿಗೆ ಆಗಾಗ ಭೇಟಿ ನೀಡಿ ಸಮಸ್ಯೆ ಸೃಷ್ಟಿಸುವುದು, ಆತನಿಗೆ ಆತನ ಸಹೋದ್ಯೋಗಿಗಳೊಂದಿಗೆ ಸಂಬಂಧ ಕಲ್ಪಿಸುವುದು ಮಾಡುತ್ತಿದ್ದಳು. ಅಲ್ಲದೆ ಗಂಡನಿಗೆ ಎಲ್ಲರ ಮುಂದೆ ಹೀನಾಯವಾಗಿ ಬೈಯುತ್ತಿದ್ದಳು ಎನ್ನಲಾಗಿದೆ. ಪತ್ನಿಯ ಈ ಕೆಲಸವನ್ನು ‘ ಕ್ರೌರ್ಯ’ ಎಂದು ಮದ್ರಾಸ್‌ ಹೈಕೋರ್ಟ್‌ ತೀರ್ಪು ಹೊರಡಿಸಿದ್ದು ಡಿವೋರ್ಸ್ ನೀಡಿದೆ.



Join Whatsapp