ಶಾಲೆ ಆವರಣದಲ್ಲಿದ್ದ ಮರ ಬಿದ್ದು ವಿದ್ಯಾರ್ಥಿ ಸಾವು: ಮಕ್ಕಳು,ಶಿಕ್ಷಕರಿಗೆ ತೀವ್ರ ಗಾಯ

Prasthutha|

ಚಂಡೀಗಢ :  ಖಾಸಗಿ ಶಾಲೆಯೊಂದರ ಆವರಣದಲ್ಲಿದ್ದ ಮರವೊಂದು ಕುಸಿದು ಬಿದ್ದು  ಮಗುವೊಂದು ಸಾವಿಗೀಡಾದ ದಾರುಣ ಘಟನೆ ನಡೆದಿದೆ.  14 ಮಕ್ಕಳು, ಒಬ್ಬ ಶಿಕ್ಷಕರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಇದರಲ್ಲಿ ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ.

- Advertisement -

ಉರುಳಿದ ಮರವು 250 ವರ್ಷ ಹಳೆಯದಾಗಿತ್ತು ಎಂದು ಹೇಳಲಾಗುತ್ತಿದೆ. ಏಕಾಏಕಿ ಮರ ಬಿದ್ದ ರಭಸಕ್ಕೆ ಹಲವು ಮಕ್ಕಳು ಗಾಯಗೊಂಡಿದ್ದು, ಮಗುವೊಂದು ಪ್ರಾಣ ಕಳೆದುಕೊಂಡಿದೆ.

ಸೆಕ್ಟರ್ 9 ರಲ್ಲಿರುವ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಊಟದ ಸಮಯದಲ್ಲಿ ಅಪಘಾತ ಸಂಭವಿಸಿದ್ದು,ಆ ಸಮಯದಲ್ಲಿ ಮರದ ಬಳಿ ಅನೇಕ ಮಕ್ಕಳು ಸೇರಿದ್ದರು. ಏಕಾಏಕಿ ಮರ ಬಿದ್ದ ಪರಿಣಾಮ ಹಲವು ಮಕ್ಕಳು ಅದರ ಅಡಿಗೆ ಸಿಲುಕಿಕೊಂಡು ಕೂಗಾಡುತ್ತಿದ್ದರು. ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.



Join Whatsapp