ನವದೆಹಲಿ: ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘನೆಯ ನೆಪದಲ್ಲಿ ಅಮ್ನೆಸ್ಟಿ ಇಂಡಿಯಾ ಇಂಟರ್’ನ್ಯಾಷನಲ್ ಪ್ರೈ. ಲಿಮಿಟೆಡ್ ಮತ್ತು ಮಾಜಿ ಸಿಇಒ ಆಕಾರ್ ಪಟೇಲ್ ಅವರಿಗೆ ಇಡಿ ಕ್ರಮವಾಗಿ 51.72 ಕೋಟಿ ಮತ್ತು 10 ಕೋಟಿ ದಂಡವನ್ನು ವಿಧಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ನಿಯಮವನ್ನು ಉಲ್ಲಂಘಿಸಿ ಹಣವನ್ನು ಪಡೆದ ಕಾರಣ ದಂಡದ ನೋಟಿಸ್ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಬ್ರಿಟನ್’ನ ಎಫ್.ಡಿ.ಐ ಮಾರ್ಗವನ್ನು ಅನುಸರಿಸಿ ತನ್ನ ಭಾರತೀಯ ಘಟಕದ ಮೂಲಕ ವಿದೇಶಕ್ಕೆ ಹೆಚ್ಚಿನ ಹಣವನ್ನು ಕಳುಹಿಸಿದೆ ಎಂದು ಆರೋಪಿಸಲಾಗಿದೆ.