ಬೀಜಿಂಗ್: ಬೌದ್ಧ ಧರ್ಮದ ಗುರು ದಲೈಲಾಮರ ಹುಟ್ಟು ಹಬ್ಬದ ಶುಭಕೋರಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಚೀನಾ ತರಾಟೆಗೆ ತೆಗೆದುಕೊಂಡಿದೆ.
ಬುಧವಾರ (08-07)ದಂದು ದಲೈಲಾಮರ ಹುಟ್ಟು ಹಬ್ಬವಾದ್ದರಿಂದ ಪ್ರಧಾನಿ ಮೋದಿಯು ಟ್ಟೀಟ್ ಮೂಲಕ ‘ದಲೈಲಾಮ ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಲಭಿಸಲಿ’ ಎಂದು ಶುಭಕೋರಿದ್ದರು. ಈ ನಡೆಗೆ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ.
‘ದಲೈಲಾಮ ಚೀನಾದ ರಾಜಕೀಯ ಗಡಿಪಾರಿನಲ್ಲಿದ್ದಾರೆ. ದಲೈಲಾಮರ ಚೀನಾ ವಿರೋಧಿ ನಿಲುವಿಗೆ ಭಾರತವು ಬೆಂಬಲ ವ್ಯಕ್ತಪಡಿಸುತ್ತಿದೆ. ನಮ್ಮ ದೇಶದ ಆಂತರಿಕ ವಿಚಾರಗಳಿಗೆ ಭಾರತ ತಲೆಹಾಕಬಾರದು. ಅವರಿಗೆ ಶುಭಾಶಯ ಕೋರಬಾರದಿತ್ತು’ ಎಂದು ಚೀನಾದ ವಿದೇಶಾಂಗ ಸಚಿವ ಝಾವೋ ಲಿಜ್ಜನ್ ವಿರೋಧ ವ್ಯಕ್ತಪಡಿಸಿದ್ದಾರೆ.