ಹರ್ಷಾ ಅಕ್ಕನಿಗೆ ಆರಗ ಪ್ರತ್ಯುತ್ತರ: ಅವರು ಹೇಳಿದ್ದೆಲ್ಲಾ ಮಾಡೋಕ್ಕಾಗಲ್ಲ ಎಂದ ಗೃಹ ಸಚಿವರು

Prasthutha: July 7, 2022

ಬೆಂಗಳೂರು; ನ್ಯಾಯ ಕೇಳಲು ಹೋದರೆ ಗಧರಿಸಿ ಕಳುಹಿಸುತ್ತಾರೆ ಎಂದು ಹರ್ಷನ‌ ಸಹೋದರಿ ಹೇಳಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಗೃಹಸಚಿವರು ಪ್ರತಿಕ್ರಯಿಸಿದ್ದು ಹರ್ಷಾ ಕುಟುಂಬ ಹೇಳಿದ್ದೆಲ್ಲಾ ಮಾಡೋಕೆ ಆಗಲ್ಲಾ ಎಂದು ಹೇಳಿದ್ದಾರೆ.

ಹರ್ಷಾ ಕುಟುಂಬದವರು ಹೇಳಿದ ರೀತಿಯಲ್ಲಿ ನಾನು ಮಾಡಲಿಕ್ಕೆ ಆಗಲ್ಲ. ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಒಬ್ಬ ಗೃಹ ಸಚಿವನಾಗಿ ಆರೋಪಿಗಳನ್ನು ಎಳೆದು ತಂದು ಅವರ ಮುಂದೆ ಹೊಡೆಯಲು ಆಗುತ್ತಾ ಅಥವಾ ಅವರ ಮೇಲೆ ಫೈರ್ ಮಾಡಲು ಆಗುತ್ತಾ? ಎಂದು ಅರಗ ಜ್ಞಾನೇಂದ್ರ ಅವರು ಪ್ರಶ್ನಿಸಿದ್ದಾರೆ.

ನಾನು ಹರ್ಷ ಕುಟುಂಬ ಬೇಟಿ ಮಾಡಿಲ್ಲ ಅಂತ ಹೇಳಿದ್ದಾರೆ . ಆದರೆ ನಾನು ಅವರ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಭೇಟಿ ಮಾಡಿದಾಗ ಅವರು ಏನೇನೂ ಮಾತನಾಡುತ್ತಾರೆ. ಯಾವತ್ತು ಮಾಡುತ್ತೀರಿ, ಯಾವ ಕ್ಷಣದಲ್ಲಿ ಮಾಡುತ್ತೀರಿ ಅಂತೆಲ್ಲಾ ಕೇಳುತ್ತಾರೆ. ನಾನು ಗೃಹ ಸಚಿವನಾಗಿ ಏನು ಮಾತನಾಡಲು ಸಾಧ್ಯ? ಹಾಗಾಗಿ ಜಾಸ್ತಿ ಮಾತನಾಡುವುದಿಲ್ಲ ಎಂದು ತೀರ್ಮಾನಿಸಿದ್ದೇವೆ.

ಸಮಾಧಾನವಾಗಿ ಮಾತನಾಡಿ ಎಂದರೆ ಕೂಗಿಕೊಂಡು ಹೋಗಿ ದಾರಿ ಮಧ್ಯೆ ನಿಂತು ಬೊಬ್ಬೆ ಹಾಕಿದ್ದಾರೆ ಎಂದು ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ