ಮಡಿಕೇರಿ: ಒಂದು ವಾರದಿಂದ ಮುಂದುವರಿದ ಮಹಾಮಳೆಯಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಲಾ 5 ಲಕ್ಷ ರೂ. ಹಾಗೂ ಮನೆಗೆ ಹಾನಿಯಾಗಿದ್ದರೆ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ರವರು ಘೋಷಿಸಿದ್ದಾರೆ.
ಸರಣಿ ಭೂಕಂಪನದ ಕೇಂದ್ರ ಬಿಂದುವಾದ ಮಡಿಕೇರಿ ತಾಲೂಕಿನ ಚೆಂಬು ಗ್ರಾಮಕ್ಕೆ ಭೇಟಿ ನೀಡಿ ಮಳೆಹಾನಿ ಸಂತ್ರಸ್ತರೊಂದಿಗೆ ಚರ್ಚಿಸಿದ ಸಚಿವರು ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಹಾಗೂ ಧಾರಾಕಾರ ಮಳೆಯಿಂದ ಮನೆ ಸಂಪೂರ್ಣವಾಗಿ ಬಿದ್ದು ನಷ್ಟವಾಗಿದ್ದರೆ 5 ಲಕ್ಷ ರೂ. ಮತ್ತು ಮನೆಗೆ ಹಾನಿಯಾಗಿದ್ದರೆ 50 ಸಾವಿರ ರೂ. ಪರಿಹಾರ ವಿತರಿಸಲು ಬೆಂಗಳೂರಿಗೆ ತಲುಪಿದ ತಕ್ಷಣ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.