ಉಳ್ಳಾಲದಲ್ಲಿ ಕಾಮಗಾರಿ ವಿಳಂಬ: ನಗರಸಭಾಧ್ಯಕ್ಷರ ವಿರುದ್ಧವೇ ಧರಣಿ ನಡೆಸಿದ ಸ್ವ ಪಕ್ಷದ ಕೌನ್ಸಿಲರ್ !

Prasthutha|

ಉಳ್ಳಾಲ: ತನ್ನ ವಾರ್ಡ್’ನಲ್ಲಿ ಅಭಿವೃದ್ಧಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಸ್ವಪಕ್ಷದ ನಗರಸಭಾಧ್ಯಕ್ಷರ ವಿರುದ್ಧವೇ ಕೌನ್ಸಿಲರ್ ರವಿ ಅವರು ಧರಣಿ ನಡೆಸಿದ ಅಪರೂಪದ ಪ್ರಸಂಗ ಉಳ್ಳಾಲ ನಗರಸಭೆಯ ಕಚೇರಿ ಮುಂಭಾಗದಲ್ಲಿ ನಡೆದಿದೆ.

- Advertisement -

ಉಳ್ಳಾಲ ನಗರಸಭಾ ವ್ಯಾಪ್ತಿಗೊಳಪಟ್ಟ ಸುಂದರಿಬಾಗ್ ಎಂಬಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಪ್ರದೇಶದಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಚರಂಡಿ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಒದಗಿಸುವಂತೆ ನಗರಸಭಾಧ್ಯಕ್ಷೆ ಚಿತ್ರಕಲಾ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ರವಿ ಅವರು ಸ್ವಪಕ್ಷದ ನಗರಸಭಾಧ್ಯಕ್ಷರ ಕಾರಿನ ಎದುರು ಕುಳಿತು ಧರಣಿ ನಡೆಸಿದ್ದಾರೆ.

ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಗರಸಭಾ ಉಪಾಧ್ಯಕ್ಷರಾದ ಅಯ್ಯೂಬ್ ಮಂಚಿಲ ಅವರು ಧರಣಿ ನಿರತ ಕೌನ್ಸಿಲರ್ ರವಿ ಅವರ ಮನವೊಲಿಸಲು ಪ್ರಯತ್ನಿಸಿದರೂ ಅವರ ವಿರುದ್ಧವೇ ಸದಸ್ಯ ವಾಗ್ವಾದಕ್ಕಿಳಿದಿರುವುದು ವೀಡಿಯೋದಲ್ಲಿದೆ. ಸದ್ಯ ಈ ವೀಡಿಯೋ ಸಖತ್ ಟ್ರೋಲ್ ಆಗುತ್ತಿದೆ.



Join Whatsapp