ಚಂಡೀಗಡ: ನಾಳೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎರಡನೇ ವಿವಾಹವಾಗಲಿದ್ದಾರೆ.
ಭಗವಂತ್ ಮಾನ್ ಅವರು ಚಂಡೀಗಡದಲ್ಲಿ ಡಾ.ಗುರುಪ್ರೀತ್ ಕೌರ್ ಅವರನ್ನು ವರಿಸಲಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಸೇರಿದಂತೆ ಹಲವು ಆಪ್ತರು ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಭಗವಂತ ಮಾನ್ ಅವರು ಆರು ವರುಷಗಳ ಹಿಂದೆ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು. ಅವರು ಮಕ್ಕಳು ಸಮೇತ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಮಕ್ಕಳು ಮಾತ್ರ ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಬಂದಿದ್ದರು.