ಬ್ರಿಟನ್ ಮಂತ್ರಿ ಮಂಡಲಕ್ಕೆ ರಿಷಿ ಸುನಕ್, ಸಾಜಿದ್ ಜಾವಿದ್ ರಾಜೀನಾಮೆ

Prasthutha|

ಲಂಡನ್: ಇಂಗ್ಲೆಂಡಿನ ಬೋರಿಸ್ ಜಾನ್ಸನ್ ಸಂಪುಟಕ್ಕೆ ರಿಷಿ ಸುನಕ್ ಮತ್ತು ಸಾಜಿದ್ ಜಾವಿದ್ ರಾಜೀನಾಮೆ ಸಲ್ಲಿಸಿದ್ದಾರೆ.

- Advertisement -

ಸರಕಾರವು ಗಂಭಿರವಾಗಿ, ಸ್ಪರ್ಧಾತ್ಮಕವಾಗಿ ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಚಾನ್ಸಲರ್ ರಿಷಿ ಸುನಕ್ ಹೇಳಿದರು. ಸರಕಾರವು ದೇಶದ ಹಿತಾಸಕ್ತಿಗೆ ಅನುಗುಣವಾಗಿ ನಡೆಯುತ್ತಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಹೇಳಿದರು.

ಸಂಸದ ಕ್ರಿಸ್ ಪಿಂಚರ್ ಅವರನ್ನು ಒಂದು ಸರಕಾರಿ ಹುದ್ದೆಗೆ ನೇಮಿಸಿದ್ದಕ್ಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ಕ್ಷಮೆ ಕೋರಿದ ಬೆನ್ನಿಗೇ ಈ ರಾಜೀನಾಮೆಗಳು ಸಲ್ಲಿಕೆಯಾಗಿವೆ.

- Advertisement -

ಶಿಕ್ಷಣ ಕಾರ್ಯದರ್ಶಿ ನದೀಂ ಜಹಾವಿ ಅವರನ್ನು ಹೊಸ ಚಾನ್ಸಲರ್ ಆಗಿ ನೇಮಿಸಲಾಗಿದೆ. ಡೌನಿಂಗ್ ರಸ್ತೆಯಲ್ಲಿ ಪ್ರಧಾನಿ ಮನೆಯ ಸಿಬ್ಬಂದಿ ಪ್ರಮುಖ ಜಾವೀದ್ ರ ಆರೋಗ್ಯ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಿದ್ದಾರೆ.

ಉನ್ನತ ಶಿಕ್ಷಣ ಸಚಿವ ಮೈಕೆಲ್ ಡಾನೆಲನ್ ರನ್ನು ಶಿಕ್ಷಣ ಕಾರ್ಯದರ್ಶಿಯಾಗಿ ಬಡ್ತಿ ನೀಡಲಾಗಿದೆ.

ಈ ವರ್ಷ ಉಪ ಮುಖ್ಯ ಸಚೇತಕರಾಗಿ ಪಿಂಚರ್ ರನ್ನು ನೇಮಿಸಿ ನಾನು ಕೆಟ್ಟ ತಪ್ಪು ಮಾಡಿದೆ. ಆ ಸಂಸದರ ನಡಾವಳಿಯ ಬಗ್ಗೆ ಅದಾಗಲೇ ದೂರುಗಳಿದ್ದವು ಎಂದು ಪ್ರಧಾನಿ ಜಾನ್ಸನ್ ಅವರು ಕ್ಷಮೆ ಕೋರಿದರು.

ಬಿಬಿಸಿ ಸಂದರ್ಶನದಲ್ಲಿ ಜಾನ್ಸನ್ ಅವರು ಹೇಳಿದ್ದೆಂದರೆ ,“ನಾನು ಈ ನೇಮಕದ ಮೂಲಕ ಕೆಟ್ಟ ಕೆಲಸ ಮಾಡಿದೆ. ಅದರಿಂದ ತೊಂದರೆಗೀಡಾದ ಎಲ್ಲರಿಂದಲೂ ನಾನು ಕ್ಷಮಾಪಣೆ ಕೋರುತ್ತೇನೆ” ಎಂದರು.

ಆ ನಿರ್ವಹಣೆಯ ಬಗ್ಗೆ ಪ್ರಧಾನಿಯವರು ಪ್ರತಿ ಪಕ್ಷದವರಿಂದ ಮಾತ್ರವಲ್ಲ, ಸ್ಪಪಕ್ಷದ ಸಂಸದರಿಂದಲೂ ಟೀಕೆಗೆ ಒಳಗಾಗಿದ್ದರು. ಸುನಕ್ ಮತ್ತು ಜಾವೀದ್ ರೊಂದಿಗೆ ಬಿಮ್ ಅಫೋಲಾಮಿಯವರು ಟೋರಿ ಉಪಾಧ್ಯಕ್ಷ ಟೀವಿ ನೇರ ಪ್ರಸಾರಕ್ಕೆ ಮತ್ತು ವ್ಯಾಪಾರ ರಾಯಭಾರಿ ಹುದ್ದೆಗೆ ಆಂಡ್ರ್ಯೂ ಮಾರಿಸನ್ ಅಲ್ಲದೆ ಸಚಿವ ಸಹಾಯಕರಾದ ಜೋನಾಥನ್ ಗುಲೀಸ್ ಹಾಗೂ ಸಕೀಬ್  ಬಟ್ಟಿ ಅವರುಗಳು ಸಹ ರಾಜೀನಾಮೆ ನೀಡಿದರು.

ನಾಯಕತ್ವದ ವಿರುದ್ಧ ಬಂಡಾಯ ಇರುವಾಗ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರೂಸ್, ಲೆವೆಲಿಂಗ್ ಅಪ್ ಕಾರ್ಯದರ್ಶಿ ಮೈಕೆಲ್ ಗೋವ್, ಇತರ ಸಂಪುಟ ಸಚಿವರು ಪ್ರಧಾನಿಯವರನ್ನು ಬೆಂಬಲಿಸುತ್ತಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಸಂಸ್ಕೃತಿ ಕಾರ್ಯದರ್ಶಿ ನಾದಿನ್ ಡೋರಿಸ್ ಮತ್ತು ಬ್ರೆಕ್ಸಿಟ್ ಅವಕಾಶಗಳ ಖಾತೆಯ ಸಚಿವ ಜಾಕೋಬ್ ರೀಸ್ ಮಾಗ್ ಪ್ರಧಾನಿಯವರ ಕಟ್ಟಾ ಬೆಂಬಲಿಗರು. ಮಾಗ್ ಅವರು ‘ಪ್ರಧಾನಿ ಹುದ್ದೆಯ ಸೂಕ್ತ ಕೆಲಸಕ್ಕೆ ಸೂಕ್ತ ವ್ಯಕ್ತಿ’ ಎಂದು ಮುಕ್ತವಾಗಿ ಹೇಳಿದ್ದಾರೆ.

ಕಳೆದ ವಾರವಷ್ಟೇ ಅವಿಶ್ವಾಸ ನಿರ್ಣಯ ಮಂಡನೆಯಿಂದ ಪಾರಾದ ಪ್ರಧಾನಿ ಬೋರಿಸ್ ಜಾನ್ಸನ್ ರಿಗೆ ಮಂತ್ರಿಗಳ ರಾಜೀನಾಮೆಯು ನಾಯಕತ್ವಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.



Join Whatsapp