►ಮತ್ತೊಮ್ಮೆ ಮುನ್ನೆಲೆಗೆ ಬಂದ “ಪಂಪ್ ವೆಲ್ ಗೆ ಬಲೆ” ವ್ಯಂಗ್ಯ
ಮಂಗಳೂರು: ನಿನ್ನೆ ರಾತ್ರಿಯಿಂದ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಬಹುತೇಕ ಪ್ರದೇಶ ಜಲಾವೃತಗೊಂಡಿದೆ, ರಸ್ತೆಗಳು ನದಿಯಂತಾಗಿದೆ. ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹಳೇ ಹೇಳಿಕೆಯೊಂದು ಭಾರಿ ವೈರಲ್ ಆಗುತ್ತಿದೆ.
ಪಡೀಲ್ ಅಂಡರ್ ಪಾಸ್ ಸೇರಿಂದತೆ ಪಂಪ್ ವೆಲ್ ಕೂಡ ಜಲಾವೃತಗೊಂಡಿದ್ದು, ನೆಟ್ಟಿಗರು “ಪಂಪ್ ವೆಲ್ ಗ್ ಬಲೆ” ಎಂದು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಕೊಟ್ಟಾರ ಚೌಕಿ ರಸ್ತೆಗೆ ರಾಜಕಾಲುವೆ ತುಂಬಿ ಹರಿದಿದ್ದು, ಈ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ವಾಹನ ಸವಾರರು ಸಂಚಾರ ನಡೆಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ನಗರದಲ್ಲಿ ನಡೆಯುವ ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ. ಜನಪ್ರತಿನಿದಿಗಳು ಮಳೆಗಾಲ ಬರುವಾಗ ಎಚ್ಚರವಾಗುತ್ತಾರೆ. ಅಲ್ಲಲ್ಲಿ ಆಗೆದು ಹಾಕಿ ರಸ್ತೆಯಾವುದು ಗುಂಡಿ ಯಾವುದು ಗೊತ್ತಾಗುವುದಿಲ್ಲ ಎಂದು ಸಂಸದರು, ಶಾಸಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಳಿನ್ ಕುಮಾರ್ ಹಳೇ ಹೇಳಿಕೆಯಂತೂ ಸಖತ್ ಟ್ರೋಲ್ ಗೊಳಗಾಗುತ್ತಿದೆ.