►► ತುರ್ತು ಸಚಿವ ಸಂಪುಟ ಕರೆದ ಸಿಎಂ ಉದ್ಧವ್ ಠಾಕ್ರೆ
ಮುಂಬೈ: ನಾಳೆ ಸಂಜೆ(ಜೂನ್ 30) ಐದರೊಳಗೆ ವಿಶ್ವಾಸಮತಯಾಚನೆ ನಡೆಸುವಂತೆ ರಾಜ್ಯಪಾಲರು ಸೂಚಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ಭಗಂತ್ ಸಿಂಗ್ ಕೋಶ್ಯಾರಿ ಮಹಾ ಅಘಾಡಿ ಸರಕಾರಕ್ಕೆ ನಾಳೆ ಸಂಜೆ ಐದರೊಳಗೆ ಬಹುಮತ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಉದ್ಧವ್ ಸಂಪುಟ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ, ವಿಶ್ವಾಸಮತಯಾಚನೆಗೂ ಮುನ್ನವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಯೇ ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ.
ನಾಳೆ ನಡೆಯಲಿರುವ ವಿಶ್ವಾಸಮತಯಾಚನೆಗೆ ರೆಬೆಲ್ ಶಾಸಕರು ಆಗಮಿಸಲಿದ್ದಾರೆ. ಇಂದು ಗೋವಾಗೆ ಬಂದಿಳಿದಿರುವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು, ಇಂದು ಗೋವಾದಲ್ಲೇ ವಾಸ್ತವ್ಯ ಹೂಡಲಿದ್ದು, ನಾಳೆ ಮುಂಬೈ ತಲುಪಲಿದ್ದಾರೆ.