ರಾಜ್ಯದ ಮೊದಲ ಸರ್ಕಾರಿ ಗೋಶಾಲೆ ಉದ್ಘಾಟನೆ

Prasthutha|

ಚಿಕ್ಕಮಗಳೂರು: ರಾಜ್ಯದ ಮೊದಲ ಸರ್ಕಾರಿ ಗೋ ಶಾಲೆ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಉದ್ಘಾಟನೆಗೊಂಡಿದ್ದು ಇದು ರಾಜ್ಯದ ಬಜೆಟ್ ಘೋಷಿತ ಮೊದಲ ಸರ್ಕಾರಿ ಗೋ ಶಾಲೆಯಾಗಿದೆ.

- Advertisement -

ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿ ಜಿಲ್ಲೆಗೊಂದು ಸರ್ಕಾರಿ ಗೋ ಶಾಲೆ ಘೋಷಣೆ ಮಾಡಿದ್ದು, ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಗೋ ಶಾಲೆ ಆರಂಭವಾಗಿದೆ. ಎಮ್ಮೆದೊಡ್ಡಿ ಸರ್ಕಾರಿ ಗೋ ಶಾಲೆಯಲ್ಲಿ 300 ಗೋವುಗಳಿಗೆ ಆಶ್ರಯ ನೀಡುವ ಸೌಲಭ್ಯ ಕಲ್ಪಿಸಲಾಗಿದ್ದು 10 ಎಕರೆ ಪ್ರದೇಶದಲ್ಲಿ ವಿಶಾಲವಾದ ಗೋಶಾಲೆ ಸ್ಥಾಪನೆ ಮಾಡಲಾಗಿದೆ

ಮೇವು ನೀಡಿ ಪಶು ಸಂಗೋಪನಾ‌ ಸಚಿವ ಪ್ರಭು ಚೌಹಾಣ್ ಅವರು ಇದನ್ನು ಉದ್ಘಾಟಿಸಿದ್ದು ಬಳಿಕ ಗೋ ಶಾಲೆಯ ಕೇಂದ್ರವನ್ನು ಸಚಿವ ಪ್ರಭು ಚೌಹಾಣ್ ವೀಕ್ಷಣೆ ಮಾಡಿದ್ದಾರೆ‌.



Join Whatsapp