ತಾಯಿ ಮಗಳ ಕೊಲೆ ಶಂಕೆ: ಸೂಕ್ತ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ನಿಗಮ ಅಧ್ಯಕ್ಷ ಗಿರೀಶ್ ಉಪ್ಪಾರ ಒತ್ತಾಯ

Prasthutha|

ಬೆಂಗಳೂರು : ಮೈಸೂರು ಜಿಲ್ಲೆ ವರುಣಾ ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ಇತೀಚೆಗೆ ನಡೆದಿರುವ ತಾಯಿ ಮಗಳ ಕೊಲೆ ಪ್ರಕರಣ ಕುರಿತು ಪೋಲಿಸರು ಸೂಕ್ತ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಗಿರೀಶ್ ಉಪ್ಪಾರ್ ಒತ್ತಾಯಿಸಿದರು.

- Advertisement -

ಬೆಂಗಳೂರಿನಲ್ಲಿಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 19ರಂದು ಈ ಜೋಡಿ ಕೊಲೆ ಪ್ರಕರಣ ನಡೆದಿದ್ದು. ಬಿಳಿಗೆರೆ ಸಮೀಪದ ಕಾಲುವೆಯಲ್ಲಿ ಶವವಾಗಿ ಇಬ್ಬರು ಪತ್ತೆಯಾಗಿದ್ದು. ಅತ್ಯಂತ ಹಿಂದುಳಿದ ಜನಾಂಗವಾದ ಉಪ್ಪಾರ ಸಮುದಾಯಕ್ಕೆ ಸೇರಿದ ಐವತ್ತು ವರ್ಷದ ಪುಟ್ಟರಂಗಮ್ಮ, ಮೂವತ್ತು ವರ್ಷದ ಮಣಿ ಕೊಲೆಯಾಗಿದ್ದಾರೆ. ಮಗಳು ಮಣಿ ಬೆತ್ತಲೆ ಶವವಾಗಿ ಪತ್ತೆಯಾಗಿದ್ದು. ಇದು ಮೇಲ್ನೋಟಕ್ಕೆ ಆತ್ಯಾಚಾರವೆಸಗಿ ಕೊಲೆ ಮಾಡಿರುವುದು ಕಂಡು ಬಂದಿದೆ. ಪೋಲಿಸರು ಇದುವರೆಗೂ ಯಾವುದೇ ಪ್ರಕರಣ ದಾಖಲಿಸದೇ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳದೆ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣದ ಕುರಿತು ಪೋಲಿಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ನಿನ್ನೆ ದಿಡೀರನೆ ಬಿಳಿಗೆರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಸಂತ್ರಸ್ತರ ಕುಟುಂಬಕ್ಕೆ 25ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಆರೋಪಿಗಳನ್ನು 48 ಗಂಟೆಯೊಳಗೆ ಬಂಧಿಸಬೇಕೆಂದು ಜಿಲ್ಲಾ ಪೋಲಿಸರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

- Advertisement -

ಕೊಲೆ ನಡೆದು ಒಂದು ವಾರ ಕಳೆಯುತ್ತಾ ಬಂದರೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಉಪ ಪೋಲಿಸ್ ಆಯುಕ್ತರು ಭೇಟಿ ನೀಡಿ ವಿಚಾರಣೆ ನಡೆಸಿಲ್ಲ. ಈ ಕುರಿತಂತೆ ರಾಜ್ಯ ಅಪರಾಧ ವಿಭಾಗದ ಪೋಲಿಸ್ ನಿರ್ದೇಶಕ ರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ಶ್ರೀಘ್ರದಲ್ಲೇ ಸೂಕ್ತ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹೇರಲಾಗುವುದು ಎಂದು ತಿಳಿಸಿದರು.

Join Whatsapp