ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ್ದು ಅನರ್ಹತೆ ಪ್ರಶ್ನಿಸಿ ಶಿಂಧೆ ಸೇರಿ 16 ಮಂದಿ ಶಾಸಕರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ಇಂದು ಅರ್ಜಿ ವಿಚಾರಣೆ ನಡೆಸಲಿದ್ದು, ಡೆಪ್ಯೂಟಿ ಸ್ಪೀಕರ್ ನೀಡಿರೋ ನೋಟಿಸ್ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ.
ಏಕನಾಥ್ ಶಿಂಧೆ ಟೀಂ ಎರಡು ಅರ್ಜಿ ಸಲ್ಲಿಕೆ ಮಾಡಿದ್ದು, ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ವಕೀಲ ಹರೀಶ್ ಸಾಳ್ವೆ ಶಿಂಧೆ ಪರ ವಾದ ಮಾಡಲಿದ್ದು, ಇಂದು ಸಂಜೆಯೊಳಗೆ ಉತ್ತರಿಸಲು ಡೆಪ್ಯೂಟಿ ಸ್ಪೀಕರ್ ಗೆ ನೋಟಿಸ್ ನೀಡಿದೆ.
ಶಿಂಧೆ ನೇತೃತ್ವದ್ದೇ ನಿಜವಾದ ಶಿವಸೇನೆ ಎಂದು 2ನೇ ಅರ್ಜಿ ಸಲ್ಲಿಸಲಾಗಿದೆ. ಉದಯ್ ಸಾಮಂತ್ ಎರಡನೇ ಅರ್ಜಿ ಸಲ್ಲಿಕೆ ಮಾಡಿದ್ದು, ಸುಪ್ರೀಂ ಕೋರ್ಟ್ ನತ್ತ ಮಹಾರಾಷ್ಟ್ರ ಲೀಡರ್ಸ್ ಚಿತ್ತವಿದೆ.