ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 6ನೇ ವಾರ್ಡ್ ಅಗರಮೇಳು ಜಾರಂದಾಯ ದೈವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಇಂದು ಮುಂಜಾನೆ ಬೃಹತ್ ಗಾತ್ರದ ಮರವೊಂದು ಧರೆಗುರುಳಿದ್ದು, ಸ್ಥಳೀಯರು ನೀಡಿದ ಮಾಹಿತಿಯನ್ನಾಧರಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರವನ್ನು ಎಸ್ ಡಿಪಿಐ ಕಾರ್ಯಕರ್ತರು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಮರ ತೆರವುಗೊಳಿಸಿದ ಬಳಿಕ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ ವಿದ್ಯುತ್ ಸಂಪರ್ಕವನ್ನು ಸರಿಪಡಿಸಲು ಮನವಿ ಮಾಡಲಾಯಿತು .ತೆರವು ಕಾರ್ಯದಲ್ಲಿ ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಅಜೀಜ್ ಸುರತ್ಕಲ್, ಕ್ಷೇತ್ರ ಸಮಿತಿ ಕಾರ್ಯದರ್ಶಿ ಆಝರ್ ಚೊಕ್ಕಬೆಟ್ಟು , 5ನೇ ವಾರ್ಡ್ ಅಧ್ಯಕ್ಷರಾದ ಉಮರ್ ಫಾರೂಕ್, ಇರ್ಫಾನ್, ಸರ್ಫಾನ್,ಆಮೀನ್, ಇಮ್ತಿಯಾಜ್,ಬಶೀರ್, ಇತರ ಕಾರ್ಯಕರ್ತರು, ನಾಗರಿಕರು ಈ ಕಾರ್ಯದಲ್ಲಿ ತೊಡಗಿದ್ದರು.