ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಾಕೂಟಕ್ಕೆ ಹಿಟ್’ಮ್ಯಾನ್ ಇಲ್ಲ

Prasthutha|

ಮುಂಬೈ: ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು, ಜುಲೈ 1 ರಿಂದ ಬರ್ಮಿಂಗ್’ಹ್ಯಾಮ್’ನ ಎಡ್ಜ್’ಬಾಸ್ಟನ್’ನಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಾಟಕ್ಕೆ ಅಲಭ್ಯವಾಗಲಿದ್ದಾರೆ. ಇದರೊಂದಿಗೆ ಭಾರತ ತಂಡವು ಪಂದ್ಯಾಕೂಟ ಆರಂಭಕ್ಕೂ ಮೊದಲು ಹಿನ್ನಡೆ ಅನುಭವಿಸಿದೆ.

- Advertisement -

ರಾಪಿಡ್ ಆಂಟಿಜೆನ್ ಟೆಸ್ಟ್ (ಆರ್.ಎ.ಟಿ) ವೇಳೆ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದಾರೆ ಎಂದು ಬಿಸಿಸಿಐ ದೃಢಪಡಿಸಿದೆ. ಇದರಿಂದಾಗಿ ನಾಯಕನನ್ನು ಟೆಸ್ಟ್ ಮುಂಚಿತವಾಗಿ ತಂಡದ ಹೋಟೆಲ್’ನಿಂದ ಪ್ರತ್ಯೇಕಿಸಿದೆ ಎಂದು ತಿಳಿದು ಬಂದಿದೆ.

ಲೀಸೆಸ್ಟರ್’ಶೈರ್ ಇಲೆವೆನ್ ವಿರುದ್ಧ ಅಪ್ಪನ್’ಸ್ಟೀಲ್ ಕೌಂಟಿ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಭಾಗವಹಿಸಿದ್ದು, ಆರಂಭಿಕ ಇನ್ನಿಂಗ್ಸ್’ನಲ್ಲಿ ರೋಹಿತ್ ಶರ್ಮಾ ಅವರು 25 ರನ್ ಗಳಿಸಿದ್ದರು.

- Advertisement -

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಬಿಸಿಸಿಐ, ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಶನಿವಾರ ನಡೆಸಿದ ರಾಪಿಡ್ ಟೆಸ್ಟ್ (ಆರ್.ಎ.ಟಿ) ನಲ್ಲಿ ಕೋವಿಡ್ ಪರೀಕ್ಷೆ ನಡೆಸಿದ್ದು, ಪಾಸಿಟಿವ್ ವರದಿ ಬಂದಿದೆ. ಸದ್ಯ ಅವರು ತಂಡದ ಹೋಟೆಲ್’ನಲ್ಲಿ ಪ್ರತ್ಯೇಕವಾಗಿದ್ದಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ ಎಂದು ತಿಳಿಸಿದೆ.

ಭಾರತ ಪ್ರಸ್ತುತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ಸೋಲನ್ನು ತಪ್ಪಿಸುವ ಮೂಲಕ 2007 ರಿಂದ ಇಂಗ್ಲೆಂಡ್ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಜಯವನ್ನು ಗಳಿಸುವ ಸಾಧ್ಯತೆಯಿದೆ.



Join Whatsapp