ಅಹ್ಮದಾಬಾದ್: ಸಾಮಾಜಿಕ ಹಾಗೂ ಮಾನವ ಹಕ್ಕು ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶನಿವಾರ ಮುಂಬೈನಲ್ಲಿ ಬಂಧಿಸಿದೆ.
ಎಟಿಎಸ್ ಅಧಿಕಾರಿಗಳು ಸೆಟಲ್ವಾಡ್ ಅವರ ಮುಂಬೈ ನಿವಾಸಕ್ಕೆ ಆಗಮಿಸಿ ಅವರನ್ನು ವಶಕ್ಕೆ ಪಡೆದು ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಕರೆದೊಯ್ದಿದಿದ್ದಾರೆ.
ಗುಜರಾತ್ ಎಟಿಎಸ್ ಸೆಟಲ್ವಾಡ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಅವರ ಪರ ವಕೀಲ ವಿಜಯ್ ಹಿರೇಮಠ್, “ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಪೊಲೀಸರು ಸೆಟಲ್ವಾಡ್ ಅವರ ಮನೆ ನುಗ್ಗಿ ಅವರ ಅವರ ಮೇಲೆ ಹಲ್ಲೆ ನಡೆಸಿ ಅವರನ್ನು ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ತೀಸ್ತಾ ಸೆಟಲ್ವಾಡ್ ಮೇಲೆ ಐಪಿಸಿಯ ಸೆಕ್ಷನ್ 468 ಮತ್ತು 471 ಸೆಕ್ಷನ್ ನಡಿ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಗುಜರಾತ್ ನರಮೇಧದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಪಾತ್ರದ ಬಗ್ಗೆ SIT ಕ್ಲೀನ್ ಚಿಟ್ ಕೊಟ್ಟಿದ್ದನ್ನು ಪ್ರಶ್ನಿಸಿ ನರಮೇಧದಲ್ಲಿ ಭೀಕರವಾಗಿ ಹತ್ಯೆಯಾಗಿದ್ದ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನಿನ್ನೆ ಅದರ ತೀರ್ಪು ಪ್ರಕಟಿಸಿದ ನ್ಯಾ. ಕನ್ವಿಲ್ಕರ್ ನೇತೃತ್ವದ ಮೂವರು ಸದಸ್ಯರ ಪೀಠ ಮೋದಿ ಮತ್ತವರ ಸಂಗಡಿಗರಿಗೆ ಕ್ಲೀನ್ ಚಿಟ್ ಕೊಟ್ಟಿದ್ದನ್ನು ಎತ್ತಿಹಿಡಿದಿದೆ.
ಗೃಹಮಂತ್ರಿ ಅಮಿತ್ ಶಾ ಅವರು ಕೆಲವು ಗಂಟೆಗಳ ಹಿಂದೆ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕೂಡ ತೀಸ್ತಾ ಸೆಟಲ್ವಾಡ್ ಅವರ ಹೆಸರನ್ನು ಉಲ್ಲೇಖಿಸಿ ನಿಂದನಾತ್ಮಕ ಆರೋಪಗಳನ್ನು ಮಾಡಿದ್ದರು. ಇದು ಪ್ರಸಾರವಾದ ಕೆಲವೇ ಗಂಟೆಗಳಲ್ಲಿ, ಗುಜರಾತಿನ ATS ಪೊಲೀಸರು ತೀಸ್ತಾ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.