ಮರೆತುಹೋದ ಹಿಂದುತ್ವ ಅಜೆಂಡಾಕ್ಕೆ ನಾವು ಮರಳುತ್ತಿದ್ದೇವೆ: ವಿನಯ್ ಕಟಿಯಾರ್

Prasthutha|

ನವದೆಹಲಿ: ನವ-ಹಿಂದುತ್ವ ಅಜೆಂಡಾವು ಆಕ್ರಮಣಕಾರಿಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ರಾಮಮಂದಿರ ಹೋರಾಟ ಸಮಿತಿಯ ಪ್ರಮುಖ ನಾಯಕ ವಿನಯ್ ಕಟಿಯಾರ್, ನಾವು ಮರೆತುಹೋದ ಹಿಂದುತ್ವದ ಅಜೆಂಡಾಕ್ಕೆ ಮರಳುತ್ತಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

- Advertisement -

ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ಇದೊಂದು ಆಧಾರರಹಿತ ಮತ್ತು ತಪ್ಪುಗ್ರಹಿಕೆಯಿಂದ ಕೂಡಿದ ಆರೋಪ ಎಂದು ಬಣ್ಣಿಸಿದ್ದು, ನಾವು ಮರೆತು ಹೋದ ಹಿಂದುತ್ವದ ಅಜೆಂಡಾಕ್ಕೆ ಮರಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಅಜೆಂಡಾ ಒಂದೇ ಆಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೆಲವು ಹಳೆಯ ನೆನಪುಗಳನ್ನು ಪುನರುಜ್ಜೀವನಗೊಳಿಸಲಿದ್ದೇವೆ ಎಂದು ತಿಳಿಸಿದ್ದಾರೆ.

- Advertisement -

ಅಲ್ಲದೆ, ಬಿಜೆಪಿ ಮುಂದಿನ 25 ವರ್ಷಗಳ ಕಾಲ ದೇಶವನ್ನು ಆಳುವ ಗುರಿಯನ್ನು ಇಟ್ಟುಕೊಂಡಿದ್ದು, ಅದನ್ನು ಸಾಧಿಸಲು ನಿರಂತರವಾಗಿ ಶ್ರಮಿಸುವ ಸಮಯ ಇದಾಗಿದೆ. ಹಿಂದುತ್ವದ ಅನುಷ್ಟಾನಕ್ಕಾಗಿ ಬಿಜೆಪಿ ಸರಿಯಾದ ದಿಸೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿದರು.

“ಇಲ್ಲಿಯವರೆಗೆ ನಿಷ್ಕ್ರಿಯರಾಗಿದ್ದ ಹಿಂದೂಗಳು ಸಕ್ರಿಯರಾಗುತ್ತಿರುವುದು ನಿಜ. ಆದರೆ ಬುಲ್ಡೋಜರ್ ಅಥವಾ ಇತರ ಯಾವುದೇ ಅಭಿಯಾನಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ವಿನಯ್ ಕಟಿಯಾರ್ ತಿಳಿಸಿದ್ದಾರೆ.

Join Whatsapp