ಮಹಾರಾಷ್ಟ್ರದಲ್ಲಿ ಮುಂದುವರಿದ ರಾಜಕೀಯ ಅನಿಶ್ಚಿತತೆ: ಸೆಕ್ಷನ್ 144 ಜಾರಿ

Prasthutha|

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರಿದಿದ್ದು, ರಾಜ್ಯದ ಹಿತದೃಷ್ಟಿಯಿಂದ ಮುಂಬೈ ಪೊಲೀಸರು ಜುಲೈ 10 ರವರೆಗೆ ಸೆಕ್ಷನ್ 144 ಹೇರಿಕೆ ಮಾಡಿದ್ದಾರೆ.

- Advertisement -

ಸರ್ಕಾರದ ವಿರುದ್ಧ ದಂಗೆಗೆ ಮುಂದಾಗಿರುವ ಮತ್ತು ಅಸ್ಸಾಮ್’ನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಏಕನಾಥ್ ಶಿಂಧೆ ಸೇರಿದಂತೆ ಹಲವು ಶಿವಸೇನೆ ಮತ್ತು ಎಂವಿಎ ನಾಯಕರ ಮನೆಗಳಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಈ ಮಧ್ಯೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜ್ಯದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದರು ಮತ್ತು ರಾಜಕೀಯ ಪಕ್ಷ, ಮುಖಂಡರ ಕಚೇರಿ ಮತ್ತು ಮನೆಗಳಿಗೆ ಭ್ರದ್ರತೆ ನೀಡಲು ನಿರ್ಧರಿಸಿದ್ದಾರೆ. ಯಾವುದೇ ಪಕ್ಷದ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಳ್ಳದಂತೆ ಮತ್ತು ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳದಂತೆ ಅಧಿಕಾರಿಗಳು ಖಡಕ್ ಆಗಿ ಸೂಚಿಸಿದ್ದಾರೆ.

- Advertisement -

ಉದ್ಧವ್ ಠಾಕ್ರೆ ಇನ್ನು ಮುಂದೆ ಬಿಜೆಪಿ ಜೊತೆಗೆ ಕುಳಿತುಕೊಳ್ಳುವುದು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುವುದರೊಂದಿಗೆ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಇನ್ನಷ್ಟು ದೂರ ಎಳೆಯುವ ಲಕ್ಷಣ ಸ್ಪಷ್ಟವಾಯಿತು.

ಮುಂಬಯಿ ಪೋಲೀಸರು ಶನಿವಾರ ಜೂನ್ 25ರಿಂದ ಜುಲೈ 10ರವರೆಗೆ ಮುಂಬಯಿಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಘೋಷಿಸಿದರು. ಬಂಡಾಯ ಶಾಸಕರುಗಳ ವಿರುದ್ಧ ಅಲ್ಲಲ್ಲಿ ಶಿವಸೇನೆ ಕಾರ್ಯಕರ್ತರ ಪ್ರತಿಭಟನೆ ಜೋರಾಗುವ ಲಕ್ಷಣ ಇರುವುದರಿಂದ ಪೋಲೀಸರಾಗಲಿ, ಸರಕಾರವಾಗಲಿ ಹೆಚ್ಚಿನ ಅಪಾಯ ತಂದುಕೊಳ್ಳಲು ತಯಾರಿಲ್ಲ. ಹಾಗಾಗಿ 144 ಸೆಕ್ಷನ್ ಇಂದೇ ಜಾರಿಗೊಳಿಸಲಾಗಿದೆ.

ಇದಕ್ಕೂ ಮೊದಲು ಬಂಡಾಯಗಾರ ನಾಯಕ ಏಕನಾಥ ಶಿಂಧೆಯವರ ಬಲ ಭೂಮಿಯಾದ ಥಾಣೆಯಲ್ಲಿ 144 ಸೆಕ್ಷನ್ ಜಾರಿಗೆ ತರಲಾಗಿದೆ. ಜೂನ್ 30ರ ವರೆಗೆ ಯಾವುದೇ ರಾಜಕೀಯ ಸಭೆ, ಮೆರವಣಿಗೆಗಳಿಗೆ ಅವಕಾಶವಿಲ್ಲ ಎಂದು ಕಟ್ಟು ನಿಟ್ಟು ಮಾಡಲಾಗಿದೆ. 



Join Whatsapp