ಮುಂಬೈ: ಶಿವಸೇನೆ ಶಾಸಕರ ರಕ್ಷಣೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಗೃಹ ಸಚಿವರು (ಎಚ್ ಎಂಒ) ಹಿಂಪಡೆದಿದ್ದಾರೆ ಎಂಬ ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರ ಹೇಳಿಕೆಯನ್ನು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಶನಿವಾರ ನಿರಾಕರಿಸಿದ್ದಾರೆ.
“ಯಾವುದೇ ಶಾಸಕರ ಭದ್ರತೆಯನ್ನು ಹಿಂದೆಗೆದುಕೊಳ್ಳುವಂತೆ ಸಿಎಂ ಅಥವಾ ಗೃಹ ಸಚಿವಾಲಯದಿಂದ ಆದೇಶ ಬಂದಿಲ್ಲ. ಈ ಬಗ್ಗೆ ಮಾಡಲಾಗುತ್ತಿರುವ ಆರೋಪಗಳು ಸುಳ್ಳು ಎಂದು ಪಾಟೀಲ್ ಹೇಳಿದರು.
ಶಿವಸೇನಾ ಶಾಸಕರ ಕುಟುಂಬ ಮತ್ತು ಸಂಬಂಧಿಕರಿಗೆ ರಾಜ್ಯ ಸರ್ಕಾರವು ಭದ್ರತೆಯನ್ನು ಹಿಂದೆಗೆದುಕೊಂಡಿದೆ ಎಂದು ಏಕನಾಥ್ ಶಿಂಧೆ ಆರೋಪಿಸಿ, ಸಿಎಂ ಉದ್ಧವ್ ಠಾಕ್ರೆ, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದ್ದರು.