ಅಸ್ಸಾಮ್: 13 ತಿಂಗಳಲ್ಲಿ 22 ಮುಸ್ಲಿಮರು ಸೇರಿದಂತೆ 51 ಜನರ ಹತ್ಯೆ; ಆಘಾತಕಾರಿ ಅಂಶ ಬಹಿರಂಗ

Prasthutha|

ಗುವಾಹಟಿ: ಹಿಮಂತ ಬಿಸ್ವಾ ಅವರು ಅಸ್ಸಾಮ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಬಳಿಕ ಸುಮಾರು 161 ಪೊಲೀಸ್ ಕಾರ್ಯಾಚರಣೆ ನಡೆದಿದ್ದು, 51 ಜನರನ್ನು ಹತ್ಯೆ ನಡೆಸಲಾಗಿದೆ. 139 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 22 ಮುಸ್ಲಿಮರನ್ನು ಪೊಲೀಸರು ಹತ್ಯೆ ನಡೆಸಿದ್ದಾರೆ ಎಂದು ಗುವಾಹಟಿ ಹೈಕೋರ್ಟ್’ಗೆ ತಿಳಿಸಲಾಗಿದೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಜುಲೈ 29 ರವರೆಗೆ ಮುಂದೂಡಿದ ಹೈಕೋರ್ಟ್, ರಾಜ್ಯ ಸರ್ಕಾರ ಸಲ್ಲಿಸಿದ ಅಫಿದಾವತ್ ವರದಿ ಆಧರಿಸಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಮೇ 2021 ರಿಂದ ಮೇ 2022 ರವರೆಗೆ ಅಸ್ಸಾಮ್’ನ ವಿವಿಧ ಜಿಲ್ಲೆಗಳಲ್ಲಿ ಒಟ್ಟು 161 ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಮತ್ತು ಸರ್ಕಾರದ ಜಂಟಿ ಕಾರ್ಯದರ್ಶಿ ಅನಿಮೇಶ್ ತಾಲೂಕ್ದಾರ್ ಅವರು ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿದ್ದರು.

- Advertisement -

ಸರ್ಕಾರ ಸಲ್ಲಿಸಿರುವ ಅಫಿದವಿತ್ ದಾಖಲೆ ಪ್ರಕಾರ, ಮೇ 2021 ರಿಂದ ಮೇ 2022 ರವರೆಗೆ ಪೊಲೀಸ್ ಇಲಾಖೆ ಕಸ್ಟಡಿಯಲ್ಲಿ 51 ಜನರ ಹತ್ಯೆ ನಡೆದಿದೆ ಮತ್ತು 139 ಜನರು ಗಾಯಗೊಂಡಿದ್ದಾರೆ.



Join Whatsapp