‘ನಾನು ಅಪಹರಣಕ್ಕೊಳಗಾಗಿದ್ದೆ’ ಎಂದ ಬಂಡಾಯ ಟೀಮ್ ನಲ್ಲಿದ್ದ ಶಿವಸೇನಾ ಶಾಸಕ

Prasthutha|

►ಉದ್ಧವ್ ಠಾಕ್ರೆ ಬಣದಲ್ಲಿದ್ದೇನೆ ಎಂದ ನಿತಿನ್ ದೇಶ್ ಮುಖ್

- Advertisement -

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಯ ನಡುವೆ ಮತ್ತೊಂದು ತಿರುವು ಪಡೆದಿದ್ದು,  ಈ ಹಿಂದೆ ಬಂಡಾಯ ಸೇನಾ ನಾಯಕ ಏಕನಾಥ್ ಶಿಂಧೆ ಅವರೊಂದಿಗಿದ್ದ ಶಿವಸೇನಾ ಶಾಸಕ ನಿತಿನ್ ದೇಶ್ ಮುಖ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.

ನಾನು ಅಪಹರಣಕ್ಕೊಳಗಾಗಿದ್ದೆ ಎಂದು ಆರೋಪಿಸಿದ್ದಾರೆ.

- Advertisement -

ಸೂರತ್ ನಿಂದ ನಾಗ್ಪುರಕ್ಕೆ ಮರಳಿದ ಶಿವಸೇನೆ ಶಾಸಕ ನಿತಿನ್ ದೇಶ್ ಮುಖ್ “ನಾನು ತಪ್ಪಿಸಿಕೊಂಡು ಬೆಳಿಗ್ಗೆ 3 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಿಂತಿದ್ದಾಗ ನೂರಕ್ಕೂ ಹೆಚ್ಚು ಪೊಲೀಸರು ಬಂದು ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಅವರು ನನಗೆ ಹೃದಯಾಘಾತವಾಗಿದೆ ಎಂದು ನಟಿಸಿದರು ಮತ್ತು ನನ್ನ ದೇಹದ ಮೇಲೆ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಆ ನೆಪದಲ್ಲಿ ನನಗೆ ಹಾನಿ ಮಾಡಲು ಪ್ರಯತ್ನಿಸಿದರು” ಎಂದು ಅವರು ಆರೋಪಿಸಿದ್ದಾರೆ.

ನನ್ನನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದೇವರ ದಯೆಯಿಂದ, ನಾನು ಚೆನ್ನಾಗಿದ್ದೇನೆ. ನಾನು ಉದ್ಧವ್ ಠಾಕ್ರೆ ಅವರೊಂದಿಗೆ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಆರಂಭದಲ್ಲಿ ಥಾಣೆಯಲ್ಲಿ ಶಾಸಕರನ್ನು ಏಕನಾಥ್ ಶಿಂಧೆ  ಔತಣಕೂಟಕ್ಕೆ ಆಹ್ವಾನಿಸಿದ್ದ, ನಂತರ ಈ ಎಲ್ಲಾ ಶಾಸಕರನ್ನು ಸೂರತ್ ಗೆ ಬಸ್ಸಿನಲ್ಲಿ ಕರೆದೊಯ್ಯಲಾಯಿತು ಎಂದು  ಏಕನಾಥ್ ಶಿಂಧೆ ಅವರೊಂದಿಗೆ ಇರುವ ಶಿವಸೇನೆಯ ಹೆಚ್ಚಿನ ಶಾಸಕರು ಆರೋಪಿಸಿದ್ದಾರೆ ಎನ್ನಲಾಗಿದೆ.



Join Whatsapp