ಕೊಡಗು: ಸದಸ್ಯರ ಗೈರು ಹಿನ್ನೆಲೆ, ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ಮುಂದೂಡಿದ ಸಿದ್ದಾಪುರ ಗ್ರಾಮ ಪಂಚಾಯತಿ

Prasthutha|

ಮಡಿಕೇರಿ: ಸಿದ್ದಾಪುರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಬೇಕಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಗೆ ಗ್ರಾಮ ಪಂಚಾಯತಿಯ ಬಹುತೇಕ ಸದಸ್ಯರು ಗೈರಾಗಿದ್ದರಿಂದ ಹಾಗೂ ಸಾರ್ವಜನಿಕರು ಭಾಗವಹಿಸುವಿಕೆ ವಿರಳವಾಗಿದ್ದರಿಂದ ಸಭೆಯನ್ನು ಮುಂದೂಡಲಾಯಿತು.

- Advertisement -


ಗ್ರಾಮ ಪಂಚಾಯತಿ ಅಧ್ಯಕ್ಷೆ ರೀನಾ ತುಳಸಿ, ನೋಡೆಲ್ ಅಧಿಕಾರಿ ರಾಜೇಶ್, ಸಾಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿ ಸುರೇಶ್, ಪಿಡಿಓ ಮನಮೋಹನ್ ಉಪಸ್ಥಿತಿಯಲ್ಲಿ ಸಭೆ ಪ್ರಾರಂಭವಾಗುತ್ತಿದ್ದಂತೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಸಭೆ ನಡೆಸುವುದು ಸರಿಯಲ್ಲ, ಈ ಸಭೆಗೆ ಸಾರ್ವಜನಿಕರು ಭಾಗವಹಿಸುವಿಕೆ ಮುಖ್ಯವಾಗಿದೆ. ಹಾಗಾಗಿ ಸಭೆಯನ್ನು ಮುಂದೂಡುವಂತೆ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಸಮದ್ ಒತ್ತಾಯಿಸಿದರು.


ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಗ್ರಾಮ ಪಂಚಾಯತಿಯ ಬಹುತೇಕ ಸದಸ್ಯರು ಸಭೆಯಲ್ಲಿ ಗೈರು ಹಾಜರಾಗಿರುವುದರಿಂದ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿದರು. ಬಳಿಕ ಅಧಿಕಾರಿಗಳು ಸಭೆಯನ್ನು ಮುಂದೂಡಿದರು.

Join Whatsapp