ನವದೆಹಲಿ: ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾಸ್ಪದ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ನಾಲಿಗೆ ಕತ್ತರಿಸುವವರಿಗೆ 1 ಕೋಟಿ ಬಹುಮಾನ ಘೋಷಿಸಿದ್ದರೆನ್ನಲಾದ ಭೀಮ್ ಸೇನಾ ಮುಖ್ಯಸ್ಥ ಸತ್ಪಾಲ್ ತನ್ವರ್ ಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ತನ್ವರ್ ಬಹುಮಾನ ಘೋಷಿಸಿದ್ದಾರೆ ಎನ್ನಲಾಗಿತ್ತು. ತನ್ವರ್ ಅವರ ಪ್ರಚೋದನಕಾರಿ ವಿಡಿಯೊ ಕೋಮು ಭಾವನೆಗಳನ್ನು ಕೆರಳಿಸುತ್ತದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಆದರೆ ಎಫ್ ಐಆರ್ ಅನ್ನು ತರಾತುರಿಯಲ್ಲಿ ದಾಖಲಿಸಿದ್ದಾರೆ. ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸಿದ್ದಾರೆ ಎಂದು ಸೆಕ್ಷನ್ 154ಎ ಅನ್ನು ವಿಳಂಬವಾಗಿ ಸೇರಿಸಲಾಗಿದೆ ಎಂದು ಜೂನ್ 19ರ ಆದೇಶದಲ್ಲಿ ಡ್ಯೂಟಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೇವ್ ಸರೋಹಾ ಹೇಳಿದ್ದಾರೆ.
ಸಂಪೂರ್ಣ ವೀಡಿಯೊ ಪರಿಶೀಲಿಸದೆ ತನ್ವರ್ ವಿರುದ್ಧ ತರಾತುರಿಯಲ್ಲಿ ಎಫ್ಐಆರ್ ದಾಖಲಿಸಿದ್ದು ಏಕೆ ಎಂಬುದನ್ನು ವಿವರಿಸಲು ತನಿಖಾಧಿಕಾರಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
(ಕೃಪೆ: ಬಾರ್ & ಬೆಂಚ್)