ಕೇರಳ| ಪ್ಲಸ್ ಟು ಫಲಿತಾಂಶ ಪ್ರಕಟ; ಮಲಪ್ಪುರಂ ಜಿಲ್ಲೆಗೆ ಅತಿ ಹೆಚ್ಚು A+

Prasthutha|

ತಿರುವನಂತಪುರಂ: ಈ ವರ್ಷದ ಪ್ಲಸ್ ಟು ಮತ್ತು VHSE (Vocational Higher Secondary Education) ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ವಿ ಶಿವನ್ ಕುಟ್ಟಿ ಅವರು ಸಚಿವಾಲಯದ ಪಿಆರ್ ಚೇಂಬರ್ ನಲ್ಲಿ ಫಲಿತಾಂಶಗಳನ್ನು ಪ್ರಕಟಿಸಿದರು. ಮಧ್ಯಾಹ್ನ 12 ಗಂಟೆಯಿಂದ ವೆಬ್ ಸೈಟ್  ಮತ್ತು ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ಫಲಿತಾಂಶಗಳು ಲಭ್ಯವಿದೆ.

- Advertisement -
ಶಿಕ್ಷಣ ಸಚಿವ ವಿ ಶಿವನ್ ಕುಟ್ಟಿ

ಶೇಕಡಾ 83.87 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಕಳೆದ ವರ್ಷ ಇದು ಶೇ.87.94ರಷ್ಟಿತ್ತು. ವಿಎಚ್ಎಸ್ಇಯಲ್ಲಿ ಉತ್ತೀರ್ಣರಾದವರ ಪ್ರಮಾಣ ಶೇ.78.26ರಷ್ಟಿದೆ.

ಕಲ್ಲಿಕೋಟೆ (87.79%) ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದು, ನಂತರದ ಸ್ಥಾನ ವನ್ನು ವಯನಾಡ್ (75.07%)  ಗಿಟ್ಟಿಸಿಕೊಂಡಿದೆ. 78 ಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣವಾಗಿವೆ. ಕಳೆದ ವರ್ಷ 136 ಶಾಲೆಗಳು ಈ ಸಾಧನೆ ಮಾಡಿದ್ದವು. ಮಲಪ್ಪುರಂನಲ್ಲಿ ಅತಿ ಹೆಚ್ಚು ಮತ್ತು ವಯನಾಡಿನಲ್ಲಿ ಅತಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮಲಪ್ಪುರಂ ಜಿಲ್ಲೆ ಅತಿ ಹೆಚ್ಚು A+(4283) ಗಳಿಸಿದ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿದೆ.

- Advertisement -

ಮೌಲ್ಯಮಾಪನದ 20 ದಿನಗಳ ಬಳಿಕ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಜುಲೈ 25 ರಿಂದ ಮರುಪರೀಕ್ಷೆಗಳು ನಡೆಯಲಿದ್ದು, ಅಭ್ಯರ್ಥಿಗಳು ಈ ತಿಂಗಳ 25 ರವರೆಗೆ ಮರು ಪರೀಕ್ಷೆ ಮತ್ತು ಸುಧಾರಣಾ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.



Join Whatsapp