ರಾಷ್ಟ್ರಪತಿ ಚುನಾವಣಾ ಕಣದಿಂದ ಗಾಂಧಿ ಮೊಮ್ಮಗ ಔಟ್ : ಇನ್ನು ವಿಪಕ್ಷಗಳ ಆಯ್ಕೆ ಯಾವುದು?

Prasthutha|

ದೆಹಲಿ: ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಲಿಕ್ಕಿದ್ದು, ಬಿಜೆಪಿ ವಿರುದ್ಧದ ಚುನಾವಣಾ ಸಮರಕ್ಕೆ ವಿರೋಧ ಪಕ್ಷಗಳು ಹರಸಾಹಸ ಪಡುತ್ತಿವೆ. ವಿರೋಧ ಪಕ್ಷಗಳು ಪ್ರಸ್ತಾಪಿಸುತ್ತಿರುವ ಅಭ್ಯರ್ಥಿಗಳೆಲ್ಲಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ.

- Advertisement -

ಕೆಲ ದಿನಗಳ ಹಿಂದೆಯಷ್ಟೇ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ರಾಷ್ಟ್ರಪತಿ ಚುನಾವಣಾ ಕಣದಲ್ಲಿ ನಿರಾಸಕ್ತಿಯನ್ನು ತೋರಿ ಹಿಂದೆ ಸರಿದಿದ್ದಾರೆ. ಇದೀಗ ಅವರ ಬಳಿಕ ವಿಪಕ್ಷಗಳು ಆಶಿಸಿದ್ದ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ, ಮಹಾತ್ಮ ಗಾಂಧೀಜಿಯ ಮೊಮ್ಮಗ ಗೋಪಾಲಕೃಷ್ಣ ಗಾಂಧಿಯೂ ಇಂದು ಕಣದಿಂದ ಹಿಂದೆ ಸರಿದಿದ್ದಾರೆ.

ವಿಪಕ್ಷದ ಹಲವು ಗೌರವಾನ್ವಿತರು ರಾಷ್ಟ್ರಪತಿ ಹುದ್ದೆಗೆ ಪ್ರತಿಪಕ್ಷದ ಅಭ್ಯರ್ಥಿಯಾಗಲು ನನ್ನನ್ನು ಆಶಿಸುತ್ತಿದ್ದಾರೆ. ನಾನು ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಆದರೆ ಈ ಕುರಿತು ಆಳವಾಗಿ ವಿಮರ್ಶಿಸಿದ ಬಳಿಕ ಅಭ್ಯರ್ಥಿಯಾಗುವವರು ಪ್ರತಿಪಕ್ಷಗಳ ಏಕತೆಯ ಜೊತೆಗೆ, ರಾಷ್ಟ್ರೀಯ ಒಮ್ಮತ ಸೃಷ್ಟಿಸುವವರಾಗಿರಬೇಕು. ನನಗಿಂತ ಉತ್ತಮವಾಗಿ ಇದನ್ನು ನಿರ್ವಹಿಸುವವರು ಇದ್ದಾರೆಂದು ನಾನು ಭಾವಿಸುತ್ತೇನೆ. ನೀವು ಆ ವ್ಯಕ್ತಿಗಳಿಗೆ ಇದರ ಸದವಕಾಶ ಕೊಡಿ ಎಂದು ವಿನಂತಿಸುತ್ತಿದ್ದೇನೆ ಎಂದು ಗೋಪಾಲಕೃಷ್ಣ ಗಾಂಧಿ ಹೇಳಿದ್ದಾರೆ.



Join Whatsapp