ರಾಮಮಂದಿರ ನಿರ್ಮಾಣ: ದೇಣಿಗೆ ನೀಡಿದ 22 ಕೋಟಿ ಮೌಲ್ಯದ ಚೆಕ್ ಬೌನ್ಸ್

Prasthutha|

ಲಕ್ನೋ: ರಾಮಮಂದಿರ ನಿರ್ಮಾಣ ಕಾಮಗಾರಿ ಉಸ್ತುವಾರಿ ವಹಿಸಿಕೊಳ್ಳುತ್ತಿರುವ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಗೆ ಇದುವರೆಗೆ ಸರಿಸುಮಾರು 5,400 ಕೋಟಿಗೂ ಹೆಚ್ಚು ಮೊತ್ತ ದೇಣಿಗೆ ಬಂದಿದೆ. ಆದರೆ ಮಂದಿರ ನಿರ್ಮಾಣಕ್ಕೆ ನೀಡಿದ್ದ 22 ಕೋಟಿಗೂ ಹೆಚ್ಚು ಮೌಲ್ಯದ ಚೆಕ್ ಗಳು ಬೌನ್ಸ್ ಆಗಿದೆ ಎಂದು ಟ್ರಸ್ಟ್ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

- Advertisement -

ಕಳೆದ ವರ್ಷ ಮೂರು ತಿಂಗಳ ಅಭಿಯಾನದಲ್ಲಿಯೇ ಟ್ರಸ್ಟ್ ಬರೋಬ್ಬರಿ 3,500 ಕೋಟಿ ಹಣವನ್ನು ಸಂಗ್ರಹಿಸಿತ್ತು. ಆದರೆ ಅದರಲ್ಲಿ ಸುಮಾರು 1,500 ಗಳಷ್ಟು ಚೆಕ್ ಗಳು ಬೌನ್ಸ್ ಆಗಿದ್ದು ಮಂದಿರ ನಿರ್ಮಾಣ ಸಮಿತಿಗೆ ತಲೆನೋವನ್ನುಂಟು ಮಾಡಿದೆ.

2020 ರಲ್ಲಿ ಪ್ರಧಾನಿ ಮೋದಿ ಮಂದಿರಕ್ಕೆ ಅಡಿಗಲ್ಲು ಹಾಕಿದ್ದು, ಇದೇ ತಿಂಗಳ ಆರಂಭದಲ್ಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮಂದಿರದ ಮುಖ್ಯಗುಡಿಗೆ ಶಂಕುಸ್ಥಾಪನೆ ಮಾಡಿದ್ದರು. ಬಿಜೆಪಿ ರಾಮಮಂದಿರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು ಮುಂದಿನ ಚುನಾವಣೆಗೂ ಮುಂಚಿತವಾಗಿ ನಿರ್ಮಾಣ ಪೂರ್ತಿಮಾಡಿ ಭಕ್ತರಿಗೆ ಸಮರ್ಪಿಸುವುದಾಗಿ ಹೇಳಿಕೊಂಡಿದೆ.

Join Whatsapp