ಪಾಟ್ನಾ: ಸಶಸ್ತ್ರ ಪಡೆಗಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಹೊಸದಾಗಿ ಪರಿಚಯಿಸಿದ ‘ಅಗ್ನಿಪಥ’ ನೇಮಕಾತಿ ಯೋಜನೆಯನ್ನು ವಿರೋಧಿಸುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್, ‘ ಈ ಯೋಜನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ’ ಎಂದಿದ್ದಾರೆ.
‘ಅಗ್ನಿಪಥ್ ಯೋಜನೆ ಬಗ್ಗೆ ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಈ ಯೋಜನೆಯನ್ನು ರೂಪಿಸುವ ಮೊದಲು ನಿವೃತ್ತ ಸೇನಾ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ವ್ಯಾಪಕವಾದ ಸಮಾಲೋಚನೆಗಳು ನಡೆದಿವೆ’ ಎಂದು ಪಾಸ್ವಾನ್ ಹೇಳಿದ್ದಾರೆ.
ಇದು ದೀರ್ಘಾಲೋಚನೆಯ ಯೋಜನೆಯಾಗಿದ್ದು, ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ. 75 ಪ್ರತಿಶತ ಅಗ್ನಿವೀರ್‌ಗಳು (ನೇಮಕಾತಿ) ರಕ್ಷಣಾ ಪಡೆಗಳಲ್ಲಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಪಡೆಯುವ ಉದ್ಯೋಗಗಳ ಅವಕಾಶದ ಬಗ್ಗೆಯೂ ಈ ಯೋಜನೆಯಲ್ಲಿ ಕಂಡುಕೊಂಡಿದ್ದೇವೆ’ ಎಂದಿದ್ದಾರೆ.