ರಾಹುಲ್ ಗಾಂಧಿ ವಿಚಾರಣೆಯನ್ನು ಮುಂದೂಡಿದ ಜಾರಿ ನಿರ್ದೇಶನಾಲಯ

Prasthutha|

ನವದೆಹಲಿ: ಜಾರಿ ನಿರ್ದೇಶನಾಲಯದಿಂದ ಸತತ ಮೂರು ದಿನಗಳ ವಿಚಾರಣೆ ಎದುರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮುಂದಿನ ವಿಚಾರಣೆಗೆ ಮೂರು ದಿನಗಳ ವಿಶ್ರಾಂತಿ ನೀಡಿದೆ. ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ವಿಚಾರಣೆಯನ್ನು ಮುಂದಿನ ವಾರಕ್ಕೆ ಅಧಿಕಾರಿಗಳು ಮುಂದೂಡಿದ್ದಾರೆ.

- Advertisement -


ರಾಹುಲ್ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮೂರು ದಿನಗಳ ಕಾಲ ಮುಂದೂಡುವಂತೆ ಅಧಿಕಾರಿಗಳ ಬಳಿ ರಾಹುಲ್ ಗಾಂಧಿ ಮನವಿ ಸಲ್ಲಿಸಿದ್ದರು. ಇದೀಗ ರಾಹುಲ್ ಮನವಿಯ ಮೇರೆಗೆ ಇಡಿ ಅಧಿಕಾರಿಗಳು ಮೂರು ದಿನಗಳ ವಿಚಾರಣೆಯಿಂದ ವಿನಾಯಿತಿ ನೀಡಿದ್ದಾರೆ.


ಕಳೆದ ಮೂರು ದಿನಗಳಲ್ಲಿ ಅಂದರೆ ಸುಮಾರು 30 ಗಂಟೆಗಳ ರಾಹುಲ್ ಗಾಂಧಿ ಇಡಿ ತನಿಖಾಧಿಕಾರಿಗಳ ಮುಂದೆ ವಿಚಾರಣೆ ಎದುರಿಸಿದ್ದರು. ರಾಹುಲ್ ಗಾಂಧಿ ಹೇಳಿಕೆಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ದಾಖಲಿಸಲಾಗಿದೆ.



Join Whatsapp