ಮುಸ್ಲಿಮರೇ ಇಲ್ಲದ ಊರಿನಲ್ಲಿ ಹಿಂದೂಗಳಿಂದ 300 ವರ್ಷಗಳ ಹಳೆಯ ಮಸೀದಿಯ ಜೀರ್ಣೋದ್ಧಾರ

Prasthutha|

ಶಾಮ್ಲಿ: ಮಸೀದಿ-ದೇವಸ್ಥಾನ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಸೌಹಾರ್ದತೆಯ ಘಟನೆಯೊಂದು ಗಮನ ಸೆಳೆದಿದೆ. ಮುಸ್ಲಿಮ್ ಜನಸಂಖ್ಯೆಯೇ ಇಲ್ಲದ ಊರಿನಲ್ಲಿ, ಇಲ್ಲಿನ ಮೊಘಲರಿಗೆ ಸಂಬಂಧಿಸಿದ 300 ವರ್ಷಗಳಿಗೂ ಹೆಚ್ಚು ಹಳೆಯ ಮಸೀದಿಯನ್ನು ಹಿಂದೂಗಳು ಸಂರಕ್ಷಿಸಲು ಮುಂದಾಗಿದ್ದಾರೆ.

- Advertisement -

ವಿಶೇಷ ಎಂದರೆ ಶಾಮ್ಲಿಯ ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ. ಆದರೆ ಈ ಗ್ರಾಮದಲ್ಲಿ ಶಿಥಿಲಗೊಂಡ ಮಸೀದಿಯೊಂದು ಇದ್ದು, ಅದರ ಜೀರ್ಣೋದ್ಧಾರಕ್ಕೆ ಇಲ್ಲಿನ ಹಿಂದೂಗಳು ಮುಂದಾಗಿದ್ದು, ಈ ಮೂಲಕ ಕೋಮು ಸೌಹಾರ್ದತೆಗೆ ನಾಂದಿಹಾಡಿದ್ದಾರೆ.

1760 ಮತ್ತು 1806 ರ ನಡುವೆ ಮೊಘಲ್ ಆಳ್ವಿಕೆಯಲ್ಲಿ ಈ ಭಾಗದಲ್ಲಿ ಸಮೃದ್ಧ ರಾಜಪ್ರಭುತ್ವವಿತ್ತು. ಸುಮಾರು 300 ವರ್ಷಗಳ ಹಿಂದೆ ಇಲ್ಲಿ ವೈಭವದ ದರ್ಬಾರ್ ಇತ್ತು. ಅದೀಗ ಕೇವಲ ಇತಿಹಾಸವಾಗಿದ್ದು, ಶಿಥಿಲಗೊಂಡ ಮಸೀದಿ ಆಗಿನ ರಾಜವೈಭವವನ್ನು ನೆನಪು ಮಾಡುತ್ತಿದೆ. ಗ್ರಾಮದಲ್ಲಿ ಮುಸ್ಲಿಮರಿಲ್ಲದ ಕಾರಣ 1940 ರಿಂದ ಈ ಮಸೀದಿಯಲ್ಲಿ ಆಝಾನ್, ನಮಾಝ್ ನಡೆಯುತ್ತಿಲ್ಲ. ಈಗ ಹಳೆಯದಾದ ಈ ಕಟ್ಟಡವನ್ನು ಪುನರುಜ್ಜೀವನಗೊಳಿಸಲು ಈ ಗ್ರಾಮದ ಹಿಂದೂಗಳು ಮುಂದಾಗಿದ್ದಾರೆ.



Join Whatsapp