“ದೆಹಲಿ ಪೊಲೀಸರು ನನ್ನ ಬಟ್ಟೆಗಳನ್ನು ಹರಿದುಹಾಕಿದರು”: ಮಹಿಳಾ ಸಂಸದೆಯ ವೀಡಿಯೋ ಹಂಚಿಕೊಂಡ ಶಶಿ ತರೂರ್

Prasthutha|

ಹೊಸದಿಲ್ಲಿ: ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ವೇಳೆ ದಿಲ್ಲಿ ಪೊಲೀಸ್ ಸಿಬ್ಬಂದಿ ತನ್ನ ಬಟ್ಟೆಗಳನ್ನು ಹರಿದಿದ್ದಾರೆ ಹಾಗೂ ಇತರ ಮಹಿಳಾ ಪ್ರತಿಭಟನಕಾರರೊಂದಿಗೆ ಕ್ರಿಮಿನಲ್ ರೀತಿ ವರ್ತಿಸಿದ್ದಾರೆ ಎಂದು ಸಂಸದೆ ಜ್ಯೋತಿಮಣಿ ಆರೋಪಿಸಿದ್ದು, ಈ ವೀಡಿಯೋವನ್ನು ಪಕ್ಷದ ಹಿರಿಯ ನಾಯಕ ಶಶಿ ತರೂರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ
ಈ ವೀಡಿಯೊದಲ್ಲಿ ದಿಲ್ಲಿ ಪೊಲೀಸರು ತಮ್ಮ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಸಂಸದೆ ಜ್ಯೋತಿಮಣಿ ಆರೋಪಿಸಿದ್ದಾರೆ.
ಯಾವುದೇ ಪ್ರಜಾಪ್ರಭುತ್ವದಲ್ಲಿ ಇದು ಅತಿರೇಕದ ಸಂಗತಿಯಾಗಿದೆ. ಮಹಿಳಾ ಪ್ರತಿಭಟನಕಾರರನ್ನು ಈ ರೀತಿ ನಡೆಸಿಕೊಳ್ಳುವುದು ಪ್ರತಿ ಭಾರತೀಯ ಸಭ್ಯತೆಯ ಮಾನದಂಡವನ್ನು ಉಲ್ಲಂಘಿಸುತ್ತದೆ. ನಾನು ದಿಲ್ಲಿ ಪೊಲೀಸರ ನಡವಳಿಕೆಯನ್ನು ಖಂಡಿಸುತ್ತೇನೆ ಹಾಗೂ ಉತ್ತರದಾಯಿತ್ವವನ್ನು ಕೋರುತ್ತೇನೆ. ಸ್ಪೀಕರ್ ಓ ಬಿರ್ಲಾ ಅವರೇ ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ತರೂರ್ ಬರೆದಿದ್ದಾರೆ.
ಜ್ಯೋತಿಮಣಿ ತನ್ನ ಹರಿದ ಕುರ್ತಾವನ್ನು ತೋರಿಸುತ್ತಿರುವುದು ವಿಡಿಯೋದಲ್ಲಿದೆ. ಬಸ್ಸಿನಲ್ಲಿ ನಾನು ಸೇರಿದಂತೆ 7-8 ಮಹಿಳೆಯರಿದ್ದೆವು. ನಾವು ಪದೇ ಪದೇ ಕುಡಿಯಲು ನೀರು ಕೇಳಿದ್ದೇವೆ. ಆದರೆ ಅವರು ನೀರು ನೀಡಲು ನಿರಾಕರಿಸಿದರು. ನಾವು ನೀರನ್ನು ಹೊರಗಿನಿಂದ ಖರೀದಿಸಲು ಪ್ರಯತ್ನಿಸಿದಾಗ, ನಮಗೆ ನೀರು ಕೊಡಬೇಡಿ ಎಂದು ವ್ಯಾಪಾರಿಗಳಿಗೆ ಅವರು ಹೇಳುತ್ತಿದ್ದರು ”ಎಂದು ಜ್ಯೋತಿಮಣಿ ಆರೋಪಿಸಿದ್ದಾರೆ.

Join Whatsapp