ಮತ್ತೆ ರೂಪಾಯಿ ಬೆಲೆ ಕುಸಿತ : ಡಾಲರ್ ಎದುರು ಲೆಕ್ಕಕ್ಕಿಲ್ಲದ ರೂಪಾಯಿ

Prasthutha|

ಮುಂಬೈ: ಇತಿಹಾಸದಲ್ಲೇ ಮೊದಲ ಬಾರಿ ಅತ್ಯಂತ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿತಗೊಂಡಿದ್ದು ಇದೀಗ ಪ್ರತೀ ಡಾಲರ್ ಬೆಲೆ 78.28. ರೂ ಆಗಿದೆ.

- Advertisement -

ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳನ್ನು ನಿರಂತರ ಮಾರಾಟ ಮಾಡಿದರ ಪರಿಣಾಮ ರೂಪಾಯಿ ಮೌಲ್ಯ 77 ರ ಮಟ್ಟಕ್ಕೆ ಇಳಿದು ದುರ್ಬಲವಾದ ಆರಂಭ ಶುರುವಾಯಿತು. ಅದು ಮಧ್ಯಂತರ ವಹಿವಾಟಿನ ಅವಧಿಯಲ್ಲಿ 78.28 ಕ್ಕೆ ಕುಸಿದಿದ್ದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಈ ರೀತಿಯ ಕನಿಷ್ಠ ಮಟ್ಟದಲ್ಲಿ ಕುಸಿತ ಕಾಣಿಸಿಕೊಳ್ಳುತ್ತಿರೋದು.

ರೂಪಾಯಿ ಮೌಲ್ಯದ ಜೊತೆಗೆ ಭಾರತದ ವ್ಯಾಪಾರ ಪಾಲುದಾರರ ಕರೆನ್ಸಿ ಕೂಡಾ ಕುಸಿದಿದ್ದು ಬಿಲ್ಲಿಂಗ್ ಗಳು ಡಾಲರ್ಸ್ ಮೂಲಕ ನಡೆಯುವುದರಿಂದ ಮತ್ತು ಬಹುತೇಕ ಆಮದುದಾರರಿಗೆ ಚೌಕಾಶಿ ಶಕ್ತಿ ಕಡಿಮೆಯಾದ್ದರಿಂದ ಆಮದು ದುಬಾರಿಯಾಗಿಯೇ ಮುಂದುವರಿಯಲಿದೆ ಎಂದು ಬ್ಯಾಂಕಿಂಗ್ ವಿಶ್ಲೇ‍ಷಕರು ತಿಳಿಸಿದ್ದಾರೆ.



Join Whatsapp