ಹಜ್ಜಾಜಿಗಳ ಸೇವೆಗೆ ಸಜ್ಜಾದ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ಮಕ್ಕಾ

Prasthutha|

ಜಿದ್ದಾ: ಎರಡು ವರ್ಷಗಳ ಕೋರೋಣ ಸಾಂಕ್ರಾಮಿಕ ರೋಗದ ತರುವಾಯ ಪವಿತ್ರ ಹಜ್ಜ್ ಕರ್ಮವು ಪುನಾರರಂಭಗೊಂಡಿದ್ದು ಹಜ್ಜಾಜಿಗಳ ಸೇವೆಗೆ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ಮೆಕ್ಕಾ ಸಜ್ಜುಗೊಂಡಿದೆ.

- Advertisement -

ಈ ವರ್ಷ ಒಂದು ಮಿಲಿಯನ್ ಪ್ರಪಂಚದ ವಿವಿಧ ದೇಶಗಳ ಹಜ್ಜಾಜಿಗಳಿಗೆ ಹಜ್ಜ್ ನಿರ್ವಹಿಸಲು ಸೌದಿ ಸರಕಾರ ಅನುಮತಿ ನೀಡಿದೆ. ಅದರಂತೆ ಭಾರತದ ಸುಮಾರು ಎಂಬತ್ತು ಸಾವಿರದಷ್ಟು ಹಾಜಿಗಳು ಹಜ್ಜ್ ನಿರ್ವಹಿಸಲು ಸೌದಿ ಅರೇಬಿಯಾಗೆ ಆಗಮಿಸಲಿದ್ದಾರೆ. ಈ ಹಾಜಿ ಗಳ ಸೇವೆ ಮಾಡಲು ಇಂಡಿಯಾ ಫ್ರೆಟೆರ್ನಿಟಿ ಫೋರಮ್ ಮಕ್ಕಾ ಘಟಕವು ಸಿದ್ಧತೆ ನಡೆಸಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ಜಗತ್ತಿನ ವಿವಿಧ ಭಾಗಗಳಿಂದ ಬರುವ ಹಾಜಿ ಗಳ ಸೇವೆಯಲ್ಲಿ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ನಿರತವಾಗಿದೆ. ಅದರ ಭಾಗವಾಗಿ ಈ ವರ್ಷವೂ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ನ ಸೇವೆ ಹಾಜಿಗಳಿಗೆ ಲಭಿಸಲಿದೆ. ಅದಕ್ಕಾಗಿ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ಸ್ವಯಂ ಸೇವಕರ ಕೋ ಒರ್ಡಿನೆಷನ್ ಸಮಿತಿ ರಚಿಸಲಾಗಿದೆ.2022 ರ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ಹಜ್ಜ್ ಸ್ವಯಂ ಸೇವಕರ ಕೋ ಒರ್ಡಿನೆಟರ್ ಆಗಿ ಖಲೀಲ್ ಚೆಂಬಯಿಲ್, ಅಸಿಸ್ಟೆಂಟ್ ಕೋ ಒರ್ಡಿನೆಟರ್ ಆಗಿ ಜಮಾಲ್ ಚೆನ್ನೈ, ವಲಂಟಿಯರ್ ಕ್ಯಾಪ್ಟನ್ ಆಗಿ ಗಫ್ಫಾರ್ ಕೇರಳ, ವೈಸ್ ಕ್ಯಾಪ್ಟನ್ ಆಗಿ ಶಾಕಿರ್ ಹಕ್ ನೆಲ್ಯಾಡಿ, ಹಾಗು ಅಝೀಝಿಯಾ ಇಂಚಾರ್ಜ್ ಆಗಿ ಫಸಲ್ ಕೇರಳ ಆಯ್ಕೆಯಾದರು. ಮೆಕ್ಕಾದ ಪವಿತ್ರ ಹರಮ್ ಪರಿಸರದಲ್ಲಿ ಮತ್ತು ಹಾಜಿ ತಂಗುವ ವಸತಿ ಪ್ರದೇಶವಾದ ಅಝೀಝಿಯಾದಲ್ಲಿ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ನ ಸೇವೆಯು ಲಭ್ಯವಿದೆ.

- Advertisement -



Join Whatsapp