ಕೊಡಗು| ಅಮೆರಿಕನ್ ಅಕಾಡೆಮಿ ಆಫ್ ಆಡಿಯೋಲಜಿ ಅಧ್ಯಕ್ಷರಾಗಿ ಡಾ.ಬೋಪಣ್ಣ ಬಲ್ಲಚಂಡ ಆಯ್ಕೆ

Prasthutha|

ಮಡಿಕೇರಿ: ಅಮೆರಿಕನ್ ಅಕಾಡೆಮಿ ಆಫ್ ಆಡಿಯೋಲಜಿಯ ಅಧ್ಯಕ್ಷರಾಗಿ ಕೊಡಗು ಮೂಲದ ಹಾಗೂ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ಡಾ.ಬೋಪಣ್ಣ ಬಲ್ಲಚಂಡ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

- Advertisement -

ಮೂಲತಃ ಕೊಡಗಿನವರಾದ ಅವರು ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ 1970ನೇ ಬ್ಯಾಚಿನ ವಿದ್ಯಾರ್ಥಿಯಾಗಿದ್ದರು. ನಂತರ, ಅಮೆರಿಕಕ್ಕೆ ತೆರಳಿದ ಅವರು ಅಲ್ಲಿನ ಟೆಕ್ಸಾಸ್‌ ಹೆಲ್ತ್ ಸೈನ್ಸಸ್‌ನಲ್ಲಿ ಮುಖ್ಯ ಶ್ರವಣ ತಜ್ಞರಾಗಿ 30 ವರ್ಷಕ್ಕೂ ಅಧಿಕ ಕಾಲ ಅವರು ಸೇವೆ ಸಲ್ಲಿಸಿದ್ದರು. ಇದೀಗ ಅಮೆರಿಕದ ವಾಕ್‌ ಮತ್ತು ಶ್ರವಣ ಕ್ಷೇತ್ರದ ಅತ್ಯುನ್ನತ ಸ್ಥಾನ ಪಡೆದಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ  ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಪುಷ್ಪಾವತಿ ಅವರು,  ನಮ್ಮ ಸಂಸ್ಥೆಯಲ್ಲಿ ಪದವಿ ಪಡೆದ ಡಾ.ಬೋಪಣ್ಣ ಬಲ್ಲಚಂಡ ಅವರು ಅಮೆರಿಕದಲ್ಲಿ ಅತ್ಯುನ್ನತ ಸ್ಥಾನ ಗಳಿಸಿರುವುದು ಸಂತಸದ ವಿಚಾರ ಎಂದು ಹೇಳಿದರು.



Join Whatsapp