ಬಾಳೂರು ಪೊಲೀಸ್ ಠಾಣೆಯಲ್ಲಿ ಪರಿಸರ ದಿನಾಚರಣೆ: ‘ಪರಿಸರ ಸಮತೋಲನಕ್ಕೆ ಅರಣ್ಯ ಬೆಳೆಸಿ’

Prasthutha|

ಬಣಕಲ್:  ಪರಿಸರ ಸಂರಕ್ಷಣೆ ಹಾಗೂ ಪರಿಸರ ಸಮತೋಲನಕ್ಕೆ ಅರಣ್ಯ ಬೆಳೆಸಿ ಉತ್ತಮ ಪರಿಸರ ಸೃಷ್ಟಿಸಬೇಕು ಎಂದು ಬಾಳೂರು ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಸಿ.ಸಿ.ಪವನ್ ಕುಮಾರ್ ಹೇಳಿದರು.

- Advertisement -

ಅವರು ಬಾಳೂರು ಪೊಲೀಸ್ ಠಾಣೆಯ ಆವರಣದಲ್ಲಿ ಅಪ್ಪು ಸೇವಾ ಸಂಘ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ  ಅವರು ಚಾಲನೆ ನೀಡಿ ಮಾತನಾಡಿದರು.

ಉತ್ತಮ ಜಾತಿಯ ಗಿಡಗಳನ್ನು ನೆಡುವ ಮೂಲಕ ಉತ್ತಮ ಗಾಳಿ ನಮಗೆ ದೊರೆಯುತ್ತದೆ. ಹಣ್ಣಿನ ಗಿಡಗಳನ್ನು ನೆಡುವ ಮೂಲಕ ನಮಗೆ ಅದರಿಂದ ಉತ್ತಮ ಫಲ ಸಿಗುತ್ತದೆ. ಅರಣ್ಯ ನಾಶಮಾಡುವುದರಿಂದ ಪ್ರಕೃತಿ ವಿಕೋಪ ಉಂಟಾಗಿ ಹಾನಿ ಸಂಭವಿಸುತ್ತದೆ. ಸಂಘ ಸಂಸ್ಥೆಗಳು ಮಾತ್ರ ಪರಿಸರ ದಿನಾಚರಣೆ ಮಾಡಿದರೆ ಸಾಲದು.ಪ್ರತಿಯೊಬ್ಬ ನಾಗರಿಕರು ಪರಿಸರ ಉಳಿಸಲು ಸಹಕರಿಸಬೇಕು’ಎಂದರು.

- Advertisement -

ಈ ಸಂದರ್ಭದಲ್ಲಿ ಅಪ್ಪು ಸೇವಾ ಸಮಿತಿ ಅಧ್ಯಕ್ಷ ರಂಜಿತ್ ಕಲ್ಮನೆ, ಸದಸ್ಯರಾದ ಕೆ,ಎನ್, ಲೋಕೇಶ್ ,ಕೆ,ಎಲ್,ರವಿ, ಯೋಗೇಶ್ ಕಲ್ಮನೆ,ವಿವಿಯನ್ ಡಿ,ಸೋಜ, ಕೆ,ಎಲ್.ಅಶೋಕ್, ಶರತ್, ಸಂದೇಶ್, ಪ್ರಶಾಂತ್ ಮರ್ಕಲ್ ಹಾಗೂ ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ದಿನಕರ ಪೂಜಾರಿ ಹಾಗೂ  ಪೊಲೀಸ್ ಸಿಬ್ಬಂದಿ ವರ್ಗದವರು ಇದ್ದರು.



Join Whatsapp