ಕೊಡಗು: ಕಾಡಾನೆ ದಾಳಿ; ಯುವಕ ಸಾವು

Prasthutha|

►ಬೆಳ್ಳಂಬೆಳಿಗ್ಗೆ  ಕಾಡಾನೆ ದಾಳಿಗೆ ಮತ್ತೊಂದು ಬಲಿ

- Advertisement -

ಮಡಿಕೇರಿ: ಬೈಕ್ ನಲ್ಲಿ ತೆರಳುತ್ತಿದ್ದ ಚಾಮಣ್ಣ ಎಂಬಾತನನ್ನು ಕಾಡಾನೆಯೊಂದು ದಾಳಿ ಮಾಡಿ ಕೊಂದಿರುವ ಘಟನೆ ಕೋಣನ ಕಟ್ಟೆ  ಮರಪಾಲ  ತಿತಿಮತಿ ರಸ್ತೆಯಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ‌ ನಡೆದಿದೆ.

ಮಾರಿಯಮ್ಮ ಕಾಲೋನಿಯ ಮೂವರು ಯುವಕರು ತಿತಿಮತಿ ಕಡೆ ಬೈಕ್ ನಲ್ಲಿ ಬರುತ್ತಿದ್ದವೇಳೆ ಹಠಾತ್ ರಸ್ತೆಗಿಳಿದ ಕಾಡಾನೆ ಬೈಕ್ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ. ಅಪಾಯದ ಸೂಚನೆಯನ್ನು ಅರಿತ ಬೈಕ್ ನ ಹಿಂಬದಿಯಲ್ಲಿದ್ದ ಇಬ್ಬರು ತಕ್ಷಣ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಬೈಕ್ ಚಲಾಯಿಸುತ್ತಿದ್ದ ಚಾಮಣ್ಣ ಆನೆ ದಾಳಿಗೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜಿಲ್ಲೆಯಲ್ಲಿ ಕಾಡಾನೆ ದಾಳಿ ಮಿತಿಮೀರುತ್ತಿದ್ದು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



Join Whatsapp