ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದಕ್ಕಾಗಿ ಧೋಲಪುರ ಕ್ಷೇತ್ರದ ಶಾಸಕಿ ಶೋಭರಾಣಿ ಕುಶ್ವಾಹ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಶುಕ್ರವಾರ ನಡೆದ ರಾಜ್ಯಸಭೆಯ ಚುನಾವಣೆಯಲ್ಲಿ ಬಿಜೆಪಿ ಶಾಸಕಿ ಕುಶ್ವಾಹ್, ಕಾಂಗ್ರೆಸ್ ಪಕ್ಷಕ್ಕೆ ಮತದಾನ ಹಾಕಿದ್ದರು. ಇದೇ ಕಾರಣಕ್ಕೆ ಶಾಸಕಿಯನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪರ ಮತ ಚಲಾಯಿಸಿದ್ದರ ಕಾರಣ ಕೇಳಿ ನೋಟೀಸ್ ಹೊರಡಿಸಿ ಸಂಸ್ಪೆಂಡ್ ಮಾಡಲಾಗಿದೆ ಎನ್ನಲಾಗಿದೆ.
ಐದು ವರ್ಷಗಳ ಹಿಂದೆ ಶೋಭರಾಣಿ ಪತಿಯ ಶಾಸಕತ್ವ ರದ್ದುಪಡಿಸಿ ಜೈಲಿಗೆ ಅಟ್ಟಲಾಗಿತ್ತು. ತದನಂತರ ನಡೆದ ಉಪ ಚುನಾವಣೆಯಲ್ಲಿ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದರು .ಇದೀಗ ಅಡ್ಡ ಮತದಾನವನ್ನು ಪತಿಯ ಜೈಲುವಾಸ ಜೊತೆ ಸಂಬಂಧಿಸಲಾಗಿದ್ದು ಪಕ್ಷ ನೀಡಿದ ನೋಟೀಸ್ ಗೆ ಕುಶ್ವಾಹ್ ವಿವರಣೆ ನೀಡಿಲ್ಲ ಎನ್ನಲಾಗಿದೆ.