ಕಾಶ್ಮೀರದಲ್ಲಿ ಹತ್ಯೆ: ಸರ್ವ ಪಕ್ಷ ಸಭೆ ಕರೆಯಲು ಕಾಂಗ್ರೆಸ್ ಆಗ್ರಹ

Prasthutha|

ನವದೆಹಲಿ: ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳನ್ನು ಎದುರಿಸಲು ಸರ್ವಪಕ್ಷಗಳ ಸಭೆ ಕರೆದು ಸಲಹೆಗಳನ್ನು ತೆಗೆದುಕೊಳ್ಳುವಂತೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, “ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ, ನಿಮ್ಮ ಅಹಂ ಅನ್ನು ಬದಿಗಿರಿಸಿ ಮತ್ತು ಸರ್ವಪಕ್ಷಗಳ ಸಭೆಯನ್ನು ಕರೆಯಿರಿ. ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲರಿಂದಲೂ ಸಲಹೆಗಳನ್ನು ಪಡೆಯಿರಿ” ಎಂದು ಹೇಳಿದರು.



Join Whatsapp