ಉಪ್ಪಿನಂಗಡಿ: ಕರ್ತವ್ಯ ಲೋಪದ ಬಗ್ಗೆ ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ದೂರಿನ ಅನ್ವಯ ಶಿರಾಡಿ ಗ್ರಾಮ ಪಂಚಾಯತ್ ಅಧಿಕಾರಿ ವೆಂಕಟೇಶ್ ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳು ಅಮಾನತು ಮಾಡಿದ್ದಾರೆ.
ಗುಂಡ್ಯದ ಸಾರ್ವಜನಿಕ ಶೌಚಾಲಯದ ಗುತ್ತಿಗೆದಾರರ ನೇಮಕಾತಿಯಲ್ಲಿ ಕರ್ತವ್ಯ ಲೋಪ, ಅಂಗಡಿ ಏಲಂ ವಿಚಾರದಲ್ಲಿ ನಿಯಮ ಉಲ್ಲಂಘನೆ, ಅಂಗವಿಕಲರ ನಿಧಿ ವಿತರಣೆಯಲ್ಲಿ ಚ್ಯುತಿ, ಸಿಸಿ ಕ್ಯಾಮರಾಗಳ ಖರೀದಿಯಲ್ಲಿ ಅಕ್ರಮ , ಸಾರ್ವಜನಿಕರ ಹಣ ಸಂಗ್ರಹಣೆಯಲ್ಲಿ ಪಾರದರ್ಶಕತೆಯ ಕೊರತೆ, ಕೋವಿಡ್ ನಿರ್ವಹಣಾ ಮೊತ್ತವನ್ನು ಏಕಪಕ್ಷೀಯವಾಗಿ ಖರ್ಚು ಮುಂತಾದ ಹಲವು ದೂರುಗಳನ್ನು ವೆಂಕಟೇಶ್ ವಿರುದ್ಧ ಸಾರ್ವಜನಿಕರು ದಾಖಲಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಲೋಪ ದೃಢಪಟ್ಟಿದ್ದು, ಪಿಡಿಒ ನನ್ನು ಜೂನ್ 7 ರಂದು ಅನ್ವಯವಾಗುವಂತೆ ಮೇಲಾಧಿಕಾರಿಗಳು ಅಮಾನತು ಮಾಡಿದ್ದಾರೆ.