ಈರೋಡ್: ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳು, ತನ್ನ ಮಲತಂದೆಯಿಂದಲೇ ಹಲವು ಬಾರಿ ಅತ್ಯಾಚಾರಕ್ಕೊಳಗಾದ ಅತ್ಯಂತ ಅಮಾನವೀಯ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿನಡೆದಿದೆ.
ಸ್ತ್ರೀ ಋತುಮತಿಯಾದ ನಂತರ ಆಕೆಯಲ್ಲಿ ಹುಟ್ಟುವ ಶಿಶುಜನನಕ್ಕೆ ನೆರವಾಗುವ ಕೋಶ ಗಳನ್ನು(ಅಂಡಾಣುಗಳು) ಆ ಅಪ್ರಾಪ್ತ ಬಾಲಕಿಯಿಂದ ಬಲಾತ್ಕಾರವಾಗಿ ಮಾರಾಟ ಮಾಡಿಸಲಾಗಿದ್ದು, ಕನಿಷ್ಠ ಎಂಟು ಬಾರಿ ಹೀಗೆ ಮಾಡಲಾಗಿದೆ.
ಅಪ್ರಾಪ್ತೆ ವಯಸ್ಕ ಬಾಲಕಿ ಋತುಮತಿಯಾದಾಗಿನಿಂದ ಆಕೆಯ ಮಲತಂದೆ ಮತ್ತು ತಾಯಿ ಈ ಕೆಲಸ ಮಾಡಿಸಿ ಹಣ ಗಳಿಸುತ್ತಿದ್ದಾರೆ. ಮಾಲತಿ ಎಂಬ ಮಧ್ಯವರ್ತಿ ಈ ಬಾಲಕಿಯ ವಯಸ್ಸನ್ನು ಆಧಾರ್ ಕಾರ್ಡ್‌ನಲ್ಲಿ ಬದಲಾಯಿಸಿದ್ದಾಳೆ. ಕೆಲವು ದಿನಗಳ ಈ ಹಿಂದೆ ಮನೆಯಿಂದ ತಪ್ಪಿಸಿಕೊಂಡ ಅಪ್ರಾಪ್ತೆಯು, ಸೇಲಂನಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಳು. ನಂತರ ಸಂಬಂಧಿಕರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದರಿಂದ ಈ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಮಲತಂದೆ,ತಾಯಿ ಹಾಗೂ ಮಧ್ಯವರ್ತಿ ಮಾಲತಿಯನ್ನು ಬಂಧಿಸಲಾಗಿದೆ.